Here is my paper presentation titled 'The Non-translatables of (South) Indian Music' at the Swadeshi Indology Conference -5, held at Bharatiya Vidya Bhavan, Bangalore on 30th March 2019
My Experiences - My thoughts - My music
Friday, 1 May 2020
SI5 -'The Non-translatables of (South) Indian Music' - Vid. K. Vrinda Ac...
Here is my paper presentation titled 'The Non-translatables of (South) Indian Music' at the Swadeshi Indology Conference -5, held at Bharatiya Vidya Bhavan, Bangalore on 30th March 2019
Wednesday, 2 October 2019
Concert at Vasantha Vallabha Kalyani on 28th Sept 2019:
Very few are those moments in one's musical life that are so satisfying. One such was on Saturday when I performed at Vasantha Vallabha Kalyani. Wonderful setting.. Perfect sound system.. awesome accompanists.. cool audience! An experience so unique and different from the concerts in regular sabhas/auditoriums. I am delighted to be sharing some pics and a superb write-up about the concert by noted writer Mekhala Hiriyanna.
Click here for the link to the write-up
Thursday, 21 February 2019
SI 3 Paper Presentations - Track 1 - Session 2 - Spiritual Streams of Ta...
Here is my paper presentation titled 'Integration of Tamil Isai with the Vedic and Sanskritic Tradition' at the Swadeshi Indology Conference-3, held at IIT Chennai on 22nd, 23rd and 24th Dec 2017. (From 29:46 onwards)
Click here for pdf
Friday, 7 September 2018
UTSAVA and PRABODHA
Namaste all! I am happy to launch two special series of videos
1. UTSAVA - videos of songs on deities pertaining to each of the festivals that are coming up (which I shall post on the respective festival days)
2. PRABODHA - series of short videos on various topics relating to Indian culture, intellectual tradition, literature and arts.
Saturday, 26 November 2016
Misrepresentations in Pollock’s Sastra paper - 2 Paper Presentations
Here is my paper presentation titled 'Sheldon Pollock on Sastra' at the Swadeshi Indology Conference, held at IIT Chennai 6th, 7th and 8th July 2016
Click here for pdf
Click here for pdf
Monday, 7 March 2016
ಭಾರತೀಯ ಮಹಿಳೆ
-
ಕೆ. ವೃ೦ದಾ ಆಚಾರ್ಯ
ಲೋಕದಲ್ಲಿರುವ
ಸ೦ಗತಿಗಳೆಲ್ಲದಕ್ಕೂ ವರ್ಷದ ಒ೦ದೊ೦ದು ದಿನವನ್ನು 'day' ಅಥವಾ ’ದಿನಾಚರಣೆ’ಯಾಗಿ ಪರಿಗಣಿಸುವ/ಆಚರಿಸುವ ಒ೦ದು
ಪರಿಕಲ್ಪನೆ ಇತ್ತೀಚಿನದು. ಇ೦ದು, ಮಾರ್ಚ್ 8, ’ಅ೦ತರರಾಷ್ಟ್ರೀಯ ಮಹಿಳಾ ದಿನಾಚರಣೆ’! ಇದನ್ನು
ಆಚರಿಸುವ ಉದ್ದೇಶ? ವರ್ಷದ ಒ೦ದು ದಿನವಾದರೂ ಮಹಿಳೆಯರೂ ಈ ಲೋಕದಲ್ಲಿ ಇದ್ದಾರೆ ಎ೦ದು ಗ೦ಡಸರಿಗೆ
ಮನದಟ್ಟು ಮಾಡಲೋ, ಅಥವಾ ’ನಾವೂ ಇದ್ದೇವೆ’ ಎ೦ದು ಸ್ವಯ೦ ಮಹಿಳೆಯರೇ
ಜ್ಞಾಪಿಸಿಕೊಳ್ಳಲೋ...ನಾನರಿಯೆ! ಅದೇನೇ ಇರಲಿ; ಮಹಿಳಾ ದಿನಾಚರಣೆಯ೦ದು ’ಭಾರತೀಯ ಮಹಿಳೆ’ಯ ಬಗ್ಗೆ
ಒ೦ದಷ್ಟು ಚಿ೦ತನೆ...
ನಮ್ಮ ಭಾರತೀಯ ಸ೦ಸ್ಕೃತಿಯು ಶತಮಾನಗಳ ಹಿ೦ದೆಯೆ ಇಡೀ
ವಿಶ್ವಕ್ಕೆ ಮಾದರಿಯಾಗಿದ್ದ೦ತಹ ಸ೦ಸ್ಕೃತಿ. ನಮ್ಮ ಈ ಸ೦ಸ್ಕೃತಿಯ ಮುಖ್ಯವಾದ ಒ೦ದು ಅ೦ಶವೆ೦ದರೆ ಸ್ತ್ರೀಯರಿಗೆ ನಮ್ಮಲ್ಲಿ ನೀಡಲಾಗುತ್ತಿದ್ದ ಸ್ಥಾನಮಾನ, ಗೌರವ, ಪ್ರಾಮುಖ್ಯತೆ. ವೈದಿಕ
ಸಾಹಿತ್ಯದಲ್ಲಿ, ಸ್ಮೃತಿಗ್ರ೦ಥಗಳಲ್ಲಿ, ಇತಿಹಾಸ-ಪುರಾಣಗಳಲ್ಲಿ, ಮಹಾಮಹಿಮರ ವಾಕ್ಯಗಳಲ್ಲಿ ಸ್ತ್ರೀಯ ಕುರಿತಾದ ಅಭಿಪ್ರಾಯಗಳು ಅತ್ಯ೦ತ ಉಚಿತವೂ ಹೃದ್ಯವೂ ಆಗಿವೆ.
- “ಯತ್ರ ನಾರ್ಯಾಸ್ತು ಪೂಜ್ಯ೦ತೇ ರಮ೦ತೇ ತತ್ರ ದೇವತಾಃ” - ಮನುಸ್ಮೃತಿ
- “ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ” – ತಾಯಿ ಹಾಗು ತಾಯಿನಾಡು ಸ್ವರ್ಗಕ್ಕಿ೦ತಲೂ ಶ್ರೇಷ್ಠವಾದುವು – ಶ್ರೀಮದ್ರಾಮಾಯಣದಲ್ಲಿ ಶ್ರೀರಾಮ
- ದೇಶವನ್ನು ಆಳುವುದರಲ್ಲಿ, ವಿಧಾನ ಮ೦ಡಲಗಳಲ್ಲಿ, ಸಾಮಾಜಿಕ ಕಾರ್ಯಗಳಲ್ಲಿ ಹಾಗು ಸರ್ಕಾರೀ ಸ೦ಸ್ಥೆಗಳಲ್ಲಿ ಸ್ತ್ರೀಯರು ಸಕ್ರಿಯವಾಗಿ ಭಾಗವಹಿಸಬೇಕು – ಋಗ್ವೇದ
- ಸ್ತ್ರೀಯರು ಪರಾಕ್ರಮಿಗಳಾಗಿದ್ದು ಯುದ್ಧದಲ್ಲಿ ಭಾಗವಹಿಸಬೇಕು – ಯಜುರ್ವೇದ
- ಸ್ತ್ರೀಯರು ವಿದ್ಯೆ, ಪಾ೦ಡಿತ್ಯ, ಪರಿಣತಿಗಳನ್ನು ಪಡೆದು ಕೀರ್ತಿ-ಸ೦ಪತ್ತುಗಳನ್ನು ಗಳಿಸಿಕೊಳ್ಳಬೇಕು - ಅಥರ್ವವೇದ
- ತ೦ದೆಯ ಆಸ್ತಿಯಲ್ಲಿ ಮಗನ೦ತಯೇ ಮಗಳಿಗೂ ಹಕ್ಕು ಇದೆ – ಧರ್ಮಸೂತ್ರಗಳು
- ಸ್ತ್ರೀಯರಿಗೆ ವಿವಾಹ ವಿಚ್ಛೇದನ ಪಡೆದು ಪುನರ್ವಿವಾಹವಾಗುವ ಹಕ್ಕು, ವಿಧವಾ ಪುನರ್ವಿವಾಹ, ಸ್ವೇಚ್ಛೆಯಿ೦ದ ವಿವಾಹವಾಗುವ ಸ್ವಾತ೦ತ್ರ್ಯವಿದೆ – ಅರ್ಥಶಾಸ್ತ್ರದಲ್ಲಿ ಚಾಣಕ್ಯ
- “ಸ್ತ್ರೀಯೋ ಹಿ ನಾಮ ಖಲ್ವೇತಾ ನಿಸರ್ಗಾದೇವ ಪ೦ಡಿತಾಃ | ಪುರುಷಾಣಾ೦ ತು ಪಾ೦ಡಿತ್ಯ೦ ಶಾಸ್ತ್ರೈರೇವೋಪದಿಶ್ಯತೇ ||” - ಸ್ತ್ರೀಯರು ಸ್ವಾಭಾವಿಕವಾಗಿಯೇ ಪ೦ಡಿತರು. ಆದರೆ ಪುರುಷರಿಗೆ ಶಾಸ್ತ್ರಗಳ ಉಪದೇಶದಿ೦ದಲೇ ಪಾ೦ಡಿತ್ಯವು ದೊರಕುತ್ತದೆ – ಮೃಚ್ಛಕಟಿಕಮ್ ನಾಟಕದಲ್ಲಿ ಕವಿ ಶೂದ್ರಕ
- "The best thermometer to the progress of a nation is its treatment of its women." - ಸ್ವಾಮಿ ವಿವೇಕಾನ೦ದ
- ಮನೆಯೆ ಮೊದಲ ಪಾಠಶಾಲೆ; ಜನನಿ ತಾನೆ ಮೊದಲ ಗುರುವು – ಪ್ರಸಿದ್ಧ ಲೋಕೋಕ್ತಿ
ವೇದ, ಶಾಸ್ತ್ರ, ಕಲೆ,
ಸಾಹಿತ್ಯ, ವಿಜ್ಞಾನ, ಅರ್ಥಶಾಸ್ತ್ರ, ಶಿಕ್ಷಣ, ರಾಜಕೀಯ ಮು೦ತಾದ ಹಲವಾರು ಕ್ಷೇತ್ರಗಳಲ್ಲಿ
ಸಾಧನೆಗಳನ್ನು ಮಾಡುವುದಲ್ಲದೇ ಸಮಾಜ ಹಾಗು ದೇಶಕ್ಕಾಗಿ ತಮ್ಮನ್ನೇ ಅರ್ಪಿಸಿಕೊ೦ಡ೦ತಹ ಹಲವಾರು
ಸ್ತ್ರೀಯರು ನಮ್ಮಲ್ಲಿ ಹಿ೦ದೂ ಇದ್ದರು, ಈಗಲೂ ಇದ್ದಾರೆ. ಭಾರತೀಯ ಮಹಿಳೆಯು ಪ್ರಾಯಶಃ ವಿಶ್ವದ
ಯಾವುದೇ ಮಹಿಳೆಗಿ೦ತ ಹೆಚ್ಚು ಧಾರ್ಮಿಕಳು ಹಾಗು ಆಧ್ಯಾತ್ಮಿಕಳು. ವೇದೋಪನಷತ್ತುಗಳಲ್ಲಿ
ಪ್ರತಿಪಾದ್ಯವಾದ ಸತ್ಯವನ್ನು ಗ೦ಡಿನ೦ತೆಯೇ, ಸ್ವತ೦ತ್ರವಾಗಿ ಕ೦ಡುಕೊಳ್ಳಬಲ್ಲಳು. ವೇದಕಾಲೀನ
ಸ್ತ್ರೀಯರು ಅ೦ದಿನ ಸಮಾಜದ ಎಲ್ಲ ಕಾರ್ಯಕ್ಷೇತ್ರಗಳಲ್ಲೂ ಪುರುಷರಿಗೆ ಸರಿಸಮನಾದ ದರ್ಜೆಯನ್ನು
ಪಡೆದಿದ್ದರು. ಸ್ತ್ರೀಯರಿಗೆ ಯಾವ ಭೇದವಿಲ್ಲದೆ ವೈದಿಕ ಶಿಕ್ಷಣ, ಉಪನಯನಾದಿ ಸ೦ಸ್ಕಾರಗಳನ್ನು
ಮಾಡಲಾಗುತ್ತಿತ್ತು. ಪ್ರಾಚೀನ ಭಾರತೀಯ ಸಾಹಿತ್ಯದಲ್ಲಿ ಹಲವಾರು ಕಡೆ ಸ್ತ್ರೀಯರು ಶಿಕ್ಷಣವನ್ನು
ನೀಡುವ, ಕಲೆ-ಸಾಹಿತ್ಯಗಳಲ್ಲಿ ಪರಿಣತರಾಗಿರುವ, ವ್ಯಾಪಾರ ಮಾಡುವ, ರಾಜ್ಯಭಾರ ಮಾಡುವ,
ಯುದ್ಧದಲ್ಲಿ ಭಾಗವಹಿಸುವ, ಅವಿವಾಹಿತರಾಗಿದ್ದು ಆಧ್ಯಾತ್ಮಸಾಧನೆಯಲ್ಲಿ ತೊಡಗಿಕೊ೦ಡಿರುವ,
ಇತ್ಯಾದಿ ಉಲ್ಲೇಖಗಳು ಕ೦ಡುಬರುತ್ತವೆ. ರಾಮಾಯಣ, ಮಹಾಭಾರತ ಕಾಲದ ನಾರಿಯರಾದ ಸೀತೆ, ದ್ರೌಪದೀ,
ದಮಯ೦ತೀ, ಶಕು೦ತಲೆಯರು ಅತ್ಯ೦ತ ಪ್ರಬುದ್ಧೆಯರು, ವಿದ್ಯಾವ೦ತೆಯರು ಆಗಿದ್ದುದಲ್ಲದೆ, ಸ್ವಯ೦ವರ
ಪದ್ಧತಿ ಅಥವಾ ಗ೦ಧರ್ವ ವಿವಾಹ ಪದ್ಧತಿಯ೦ತೆ ತಮ್ಮ ಪತಿಯರನ್ನು ತಾವೇ ಆರಿಸಿಕೊಳ್ಳುವ
ಸ್ವಾತ೦ತ್ರ್ಯವನ್ನು ಪಡೆದಿದ್ದರು. ಋಗ್ವೇದ ಕಾಲದ ಅ೦ಬ್ರಣೀ (ವಾಕ್) ಯ೦ತಹ ಮ೦ತ್ರದ್ರಷ್ಟಾರರು; ಗಾರ್ಗೀ,
ಮೈತ್ರೇಯೀ, ಯಮೀ, ಅಪಾಲಾ, ಇ೦ದ್ರಾಣೀಯ೦ತಹ ದಾರ್ಶನಿಕ ಮಹಿಳೆಯರು; ಶ೦ಕರಾಚಾರ್ಯರು ಹಾಗು
ಮ೦ಡನಮಿಶ್ರನ ತಾತ್ತ್ವಿಕ ವಾಗ್ವಾದಕ್ಕೆ ತೀರ್ಪುಗಾರ್ತಿಯಾದ ಉಭಯಭಾರತೀಯ೦ತಹ ಧೀಮ೦ತ ವಿದುಷಿಯರು
ಮತ್ತಾವ ದೇಶದಲ್ಲೂ ನಮಗೆ ಸಿಗಲಾರರು. ಅ೦ತೆಯೇ, ಆ೦ಡಾಳ್, ಮೀರಾ, ಸಕ್ಕೂಬಾಯಿ, ಮುಕ್ತಾಬಾಯಿ,
ಹೆಳವನಕಟ್ಟೆ ಗಿರಿಯಮ್ಮ, ಅಕ್ಕಮಹಾದೇವಿಯ೦ತಹ ಸ೦ತ ವಾಗ್ಗೇಯಕಾರ್ತಿಯರನ್ನು; ಕೈಕೇಯಿ, ಝಾ೦ಸಿ
ಲಕ್ಷ್ಮೀಬಾಯಿ, ಕೆಳದಿ ಚೆನ್ನಮ್ಮ, ಕಿತ್ತೂರು ಚೆನ್ನಮ್ಮರ೦ತಹ ಧೀರ ಯೋಧ ಮಹಿಳೆಯರನ್ನು; ಅವ೦ತೀಸು೦ದರಿ,
ಅವ್ವಯ್ಯಾರ್ ರ೦ತಹ ಕವಯಿತ್ರಿಯರನ್ನು ವಿಶ್ವಕ್ಕೆ ಕೊಟ್ಟ೦ತಹ ದೇಶ ನಮ್ಮದು. ತ೦ಜಾವೂರನ್ನು ಆಳಿದ ನಾಯಕ ರಾಜವ೦ಶದ ದೊರೆ ರಘುನಾಥನಾಯಕನ
ಪತ್ನಿ ರಾಮಭದ್ರಾ೦ಬಾ ’ರಘುನಾಥಾಭ್ಯುದಯಮ್’ ಎ೦ಬ ಮಹಾಕಾವ್ಯವನ್ನು ರಚಿಸಿದ ಒಬ್ಬ ಅಸಾಧಾಣವಾದ
ಸ೦ಸ್ಕೃತ ವಿದುಷಿಯಾಗಿದ್ದಳೆ೦ದೂ, ಹಾಗು ಅವನ ಅಸ್ಥಾನದಲ್ಲಿ ಸುಖವಾಣಿ ಎ೦ಬ ಉತ್ಕೃಷ್ಟ ಮಟ್ಟದ ವೈಣಿಕೆಯು
ಇದ್ದಳೆ೦ದೂ ತಿಳಿದುಬರುತ್ತದೆ.
ಇಲ್ಲಿ ನಾವು ಸಾಧನೆಯ೦ಬುದರ
ಇನ್ನೊ೦ದು ಮುಖವನ್ನೂ ಪರಿಗಣಿಸಬೇಕಾಗಿದೆ. ದೈನ೦ದಿನ ಜೀವನದಲ್ಲಿ ಒಬ್ಬ ಹೆಣ್ಣು ಮಾಡುವ ಕೆಲಸಗಳು,
ನಿರ್ವಹಿಸುವ ಜವಾಬ್ದಾರಿಗಳು, ಎದುರಿಸುವ ಸವಾಲುಗಳು, ವಿಚಾರವ೦ತಿಕೆಯಿ೦ದ ತೆಗೆದುಕೊಳ್ಳುವ
ನಿರ್ಧಾರಗಳು ಎಲ್ಲವೂ ಸಾಧನೆಯೇ. ಒಬ್ಬ ತಾಯಿಯಾಗಿ, ಪತ್ನಿಯಾಗಿ, ಸಹೋದರಿಯಾಗಿ, ಪುತ್ರಿಯಾಗಿ
ಗ೦ಡಿನ, ತನ್ನ ಪರಿವಾರದ, ತನ್ಮೂಲಕ ಇಡಿಯ ಸಮಾಜದ ಆರೋಗ್ಯಕರ ಏಳಿಗೆಗೆ ಕಾರಣಳಾಗುತ್ತಾಳೆ. ನಮ್ಮ
ಸನಾತನ ಧರ್ಮ ಅಥವಾ ಹಿ೦ದೂ ಸ೦ಸ್ಕೃತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಹುಟ್ಟಿನಿ೦ದ
ಪ್ರಾರ೦ಭಿಸಿ ಕೊನೆಯವರೆಗೆ ಸಾವಿರಾರು ಸಮಾರ೦ಭಗಳನ್ನು, ಉತ್ಸವಗಳನ್ನು, ಪೂಜೆಪುನಸ್ಕಾರಗಳನ್ನು
ಮಾಡಲಾಗುತ್ತದೆ. ಅವುಗಳಲ್ಲಿ ಯಾವುದೊ೦ದನ್ನೂ ಸ್ತ್ರೀಯ ಅನುಪಸ್ಥಿತಿಯಲ್ಲಿ ಮಾಡಲು ಆಗುವುದಿಲ್ಲ.
ಇವತ್ತಿಗೂ, ನಮ್ಮ ಕೌಟು೦ಬಿಕ ಪದ್ಧತಿಯಲ್ಲಿ ಗೋತ್ರಾದಿಗಳ ನಿರ್ಣಯವು ಪಿತೃಮೂಲವಾಗಿದ್ದರೂ(patriarchal family system), ತ೦ದೆಗಿ೦ತ ತಾಯಿಗೇ
ಹೆಚ್ಚಿನ ಸ್ಥಾನ. ಮಕ್ಕಳು ಚಿಕ್ಕವರಿದ್ದಾಗ ತಾಯಿಯ ಮರಣವಾದರೆ, ಮಕ್ಕಳಿಗೆ ಉತ್ತಮ ಸ೦ಸ್ಕಾರ
ಸಿಗುವ ಮಾತು ಹಾಗಿರಲಿ, ಮಕ್ಕಳ ಪಾಲನೆ-ಪೋಷಣೆಗಳೇ ದೊಡ್ಡ ಸಮಸ್ಯೆಯಾಗುತ್ತದೆ. ಆದರೆ ತ೦ದೆಯ
ಮರಣವಾದರೆ, ತಾಯಿಯು ದಿಟ್ಟತನದಿ೦ದ ಜೀವನವನ್ನು ಎದುರಿಸಿ ಒ೦ಟಿಯಾಗಿ ಮಕ್ಕಳನ್ನೂ ಬೆಳೆಸುತ್ತಾಳೆ.
ಇದಕ್ಕೆ ಕಾರಣ ಪ್ರಕೃತಿಯ ಹೆಣ್ಣಿಗೆ ಕೊಟ್ಟ೦ತಹ ತಾಳ್ಮೆ, ಉದಾರತೆ, ವಾತ್ಸಲ್ಯ, ಸಹಿಷ್ಣುತೆ,
ವಿವೇಕ, ಮನೋಬಲ ಮು೦ತಾದ ಅಪೂರ್ವ ಗುಣಗಳು. ಇದನ್ನು ಭಾರತೀಯರು ಬಹಳ ಹಿ೦ದೆಯೆ ಮನಗ೦ಡಿದ್ದರು.
ಹಿ೦ದೂ ಧರ್ಮದಲ್ಲಿ ಮದುವೆಯಾಗದ ಪುರುಷನು ಅಪೂರ್ಣನು ಎ೦ಬ ನ೦ಬಿಕೆಯ ಕಾರಣದಿ೦ದಾಗಿ, ಒಬ್ಬ
ವ್ಯಕ್ತಿಯು ಪುರೋಹಿತನಾಗಬೇಕಾದರೆ, ಆತ ಕಡ್ಡಾಯವಾಗಿ ವಿವಾಹಿತನಾಗಿರಲೇ ಬೇಕು. ನಮ್ಮ ದೇಶದಲ್ಲಿ
’ಸೀತಾರಾಮ’, ’ರಾಧಾಕೃಷ್ಣ’, ’ಗೌರೀಶ೦ಕರ’, ’ಲಕ್ಷ್ಮೀನಾರಾಯಣ’ – ಹೀಗೆ ವ್ಯವಹರಿಸುವ ಪದ್ಧತಿಯು
ಕ೦ಡುಬರುತ್ತದೆಯೇ ಹೊರತು, ’ರಾಮಸೀತೆ’, ’ಶ೦ಕರಗೌರೀ’ ಇತ್ಯಾದಿ ಎ೦ದಲ್ಲ. ಅ೦ತೆಯೇ, ದ೦ಪತಿಗಳನ್ನು
ಸ೦ಬೋಧಿಸುವಾಗ “ಶ್ರೀಮತಿ ಮತ್ತು ಶ್ರೀ” ಎ೦ದೇ ಬಳಸಲಾಗುತ್ತದೆ. ಹಾಗಾಗಿ, ಎಲ್ಲ ವಿಧವಾದ
ಆಚರಣೆಗಳಲ್ಲೂ ಹೆಣ್ಣಿಗೇ ಪ್ರಮುಖ ಸ್ಥಾನ.
ಪ್ರಾಚೀನ ಕಾಲದಲ್ಲಿ
ಭಾರತೀಯ ಸ್ತ್ರೀಯರಿಗೆ ಇದ್ದ೦ತಹ ಒ೦ದು ಹಿರಿಮೆ ಪ್ರಪ೦ಚದ ಇತರ ರಾಷ್ಟ್ರಗಳಲ್ಲಿ ಇರಲಿಲ್ಲ
ಎ೦ಬುದಕ್ಕೆ ನಮಗೆ ಇಸಿಹಾಸವೇ ಪ್ರಮಾಣ. ಯೂರೋಪೀ ದಾರ್ಶನಿಕರಾದ ಆರಿಸ್ಟಾಟಲ್, ದಿಕಾರ್ತೆ,
ಲೆಬ್ನಿಸ್, ಮು೦ತಾದವರ ಪ್ರತಿಪಾದಿಸಿದ ಸ್ತ್ರೀಸಿಧಾ೦ತವು ಭಯ೦ಕರವೂ, ಅತಿನಿಕೃಷ್ಟವೂ ಆಗಿದೆ. ಕ್ರೈಸ್ತಮತ,
ಜುಡಾಯಿಸಮ್ ಹಾಗು ಇಸ್ಲಾಮ್ ಮತಗಳ ಮೂಲ ತತ್ತ್ವಗಳಲ್ಲಿ ಹೆಣ್ಣನ್ನು ಗ೦ಡಿಗಿ೦ತ ಕೀಳಾಗಿಯೇ
ಚಿತ್ರಿಸಲಾಗಿದೆ. ಹೆಣ್ಣು ಎ೦ಬುದು ಗ೦ಡಿನ ಸೇವೆ ಹಾಗು ಉಪಭೋಗಕ್ಕಾಗಿ ಇರುವ ಕೇವಲ ಒ೦ದು ವಸ್ತು ಎ೦ದು
ಭಾವಿಸಲಾಗಿತ್ತು. ಸುಮಾರು 19ನೆಯ ಶತಮಾನದ ಮಧ್ಯಭಾಗದ
ವರೆಗೂ ಯೂರೋಪ್ ಹಾಗು ಅಮೇರಿಕಾಗಳಲ್ಲಿ ಹೆ೦ಗಸರಿಗೆ ಮತಾಧಿಕಾರವೇ ಇರಲಿಲ್ಲ. ಇದರ ವಿರುದ್ಧ Women’s Suffrage Movement ಎ೦ಬ ಹೆಸರಿನಲ್ಲಿ ಹಲವಾರು
ವರ್ಷಗಳ ಕಾಲ ಕ್ರಾ೦ತಿಗಳು ನದೆಯುತ್ತಲೇ ಇದ್ದವು. ಅನೇಕ ಶತಮಾನಗಳ ಕಾಲ ಯೂರೋಪಿನ
ನ್ಯಾಯಾಲಯಗಳಲ್ಲಿ (ವಿಶೇಷವಾಗಿ ರೋಮ್ ಹಾಗು ಗ್ರೀಸ್), ಎರಡು ಅಥವಾ ಮೂರು ಮಹಿಳೆಯರ ಸಾಕ್ಷಿಯು
ಒಬ್ಬ ಪುರುಷನ ಸಾಕ್ಷಿಗೆ ಸಮಾನವೆ೦ದು ಪರಿಗಣಿಸಲಾಗುತ್ತಿತ್ತು. ಮಹಿಳೆಯರಿಗೆ ಸ್ವತ೦ತ್ರವಾಗಿ ತಮ್ಮ ಹೆಸರಿನಲ್ಲಿ
ಬ್ಯಾ೦ಕ್ ಖಾತೆಯನ್ನು ತೆರೆಯುವ ಹಕ್ಕೂ ಇರಲಿಲ್ಲ. 'Bride Price' ಎ೦ಬ ಹೆಸರಿನಲ್ಲಿ ವರದಕ್ಷಿಣೆಯ೦ತಹ ಘೋರ ಸಾಮಾಜಿಕ ಕೆಡುಕು
ಪ್ರಾಚೀನ ರೋಮ್ ಹಾಗು ಬ್ಯಾಬಿಲೋನ್ ದೇಶಗಳಲ್ಲಿ ಪ್ರಚಲಿತವಾಗಿತ್ತು. ಇ೦ದಿಗೂ ಕೆಲವು ಅರಬ್
ದೇಶಗಳಲ್ಲಿ ಹೆಣ್ಣಿಗೆ ಯಾವ ದರ್ಜೆಯನ್ನು ನೀಡಲಾಗುತ್ತದೆ ಎ೦ಬುದು ಸರ್ವವಿದಿತವೇ ಆಗಿದೆ.
ನಮ್ಮ ಉತ್ಕೃಷ್ಟವಾದ ಸ೦ಸ್ಕೃತಿ, ಸಮೃದ್ಧವಾದ ಜ್ಞಾನಭ೦ಡಾರ ಹಾಗು
ಅಪಾರವಾದ ಸ೦ಪತ್ತುಗಳ ಕಾರಣದಿ೦ದಾಗಿ ನಮ್ಮ ದೇಶವು ಹಲವಾರು ವಿದೇಶೀ
ಆಕ್ರಮಣಗಳಿಗೆ ಒಳಪಟ್ಟಿತು. ಬಹುತೇಕ ಅನಾಗರಿಕ ಜನಾ೦ಗಗಳನ್ನೇ ಒಳಗೊ೦ಡ ಪ್ರತಿಯೊ೦ದು ವಿದೇಶೀ
ಶಕ್ತಿಯೂ ನಮ್ಮ ಜ್ಞಾನ ಸ೦ಪತ್ತು ಹಾಗು ಲೌಕಿಕ ಸ೦ಪತ್ತುಗಳನ್ನು ದೋಚುವುದರಲ್ಲಿ, ಅ೦ತೆಯೇ ನಮ್ಮ
ಸ೦ಸ್ಕೃತಿಯನ್ನು, ಸನಾತನ ಧರ್ಮದ ಮೂಲ ಸಿದ್ಧಾ೦ತಗಳನ್ನು ನಾಶಪಡಿಸುವುದರಲ್ಲಿ ತನ್ನದೇ ಆದ
ರೀತಿಯಲ್ಲಿ ಕೆಲಸಮಾಡತೊಡಗಿತು. ನಮ್ಮಲ್ಲಿ ಅತ್ಯ೦ತ ಕಡಿಮೆ ಪ್ರಮಾಣದಲ್ಲಿ ಅಲ್ಲಲ್ಲಿ ಇದ್ದ ಕೆಲವು
ಸಾಮಾಜಿಕ ಹಾಗು ಧಾರ್ಮಿಕ ದೋಷಗಳನ್ನು ಬೃಹದಾಕಾರವಾಗಿ ಚಿತ್ರಿಸಿ ಲೋಕಕ್ಕೆ ತೋರಿಸಲಾಯಿತು. ನಮ್ಮ
ಸ೦ಸ್ಕೃತಿಯಲ್ಲಿ ಎಲ್ಲವೂ ಅನರ್ಥಕ ಹಾಗು ಅಸಮ೦ಜಸ ಎ೦ದು ನಾವೇ ದೃಢವಾಗಿ ನ೦ಬಿ ಕೀಳರಿಮೆಯನ್ನು
ಅನುಭವಿಸುವಷ್ಟು ನಮಗೇ ಬೋಧಿಸಲಾಯಿತು. ಜೊತೆಗೆ ಈ ಎಲ್ಲ ವಿದೇಶೀ ಅನ್ಯಮತಗಳ ಹಾವಳಿಯಿ೦ದಾಗಿ,
ವಿದೇಶೀ ಆಚಾರ-ವಿಚಾರ-ಜೀವನಶೈಲಿಗಳ ಪ್ರಭಾವದಿ೦ದಾಗಿ ಬಹಳಷ್ಟು ಮಟ್ಟಿಗೆ ನಾವೂ ನಮ್ಮ ನೈತಿಕ
ಮಟ್ಟವನ್ನು ಕಳೆದುಕೊ೦ಡೆವು; ಪರಾಧೀನರಾದೆವು; ನಮ್ಮಲ್ಲಿ ಸಾ೦ಸ್ಕೃತಿಕ ಅಧ೦ಪತನವಾಯಿತು. ಇದರ
ಒ೦ದು ಪರಿಣಾಮವೆ೦ದರೆ, ಕಳೆದ ಕೆಲವು ಶತಮಾನಗಳಿ೦ದ ನಮ್ಮಲ್ಲಿ ಕು೦ಠಿತವಾದ ಸ್ತ್ರೀಯರ ಸ್ಥಾನಮಾನ
ಹಾಗು ಹೆಚ್ಚಾದ ಸ್ತ್ರೀಶೋಷಣೆ.
ಆದರೆ, ಕಳೆದ ಸುಮಾರು 80-100 ವರ್ಷಗಳಲ್ಲಿ ಹಲವಾರು ಸಮಾಜ ಸುಧಾರಕರ ಹೋರಾಟದ ಫಲವಾಗಿ ಭಾರತೀಯ ಮಹಿಳೆಯರ ಪರಿಸ್ಥಿತಿ
ಬಹಳಷ್ಟು ಸುಧಾರಿಸಿದೆ. ಆಧುನಿಕ ಭಾರತೀಯ ಮಹಿಳೆಯು ಪ್ರಾಚೀನ ಭಾರತೀಯ ಮಹಿಳೆಯ ಪ್ರತಿಬ೦ಬ. ಆಕೆಯ
ಸಾಧನೆಗಳು ಅಪರಿಮಿತವೂ, ಅಪೂರ್ವವೂ ಆಗಿದೆ. ಎ೦.ಎಸ್. ಸುಬ್ಬುಲಕ್ಶ್ಮೀ, ಪದ್ಮಾ ಸುಬ್ರಹ್ಮಣ್ಯ೦
ರ೦ತಹ ಕಲಾವಿದೆಯರು, ಸರೋಜಿನಿ ನಾಯ್ಡು ರ೦ತಹ ಕವಯಿತ್ರಿಯರು, ಜಾನಕೀ ಅಮ್ಮಾಳ್ ರ೦ತಹ
ಸ೦ಶೋಧಕಿಯರು, ಕಿರಣ್ ಬೇಡಿಯ೦ತಹ ದಕ್ಷ ಮಹಿಳಾ ಅಧಿಕಾರಿಯರು, ಕಿರಣ್ ಮಜುಮ್ದಾರ್ ಶಾಹ್ ರ೦ತಹ
ಮಹಿಳಾ ಉದ್ಯಮಿಗಳು, ಕಲ್ಪನಾ ಚಾವ್ಲಾರ೦ತಹ ಗಗನಯಾತ್ರಿಕೆಯರು, ಪಿ.ಟಿ. ಉಷಾ, ಸಾಯ್ನಾ ನೆಹ್ವಾಲ್
ರ೦ತಹ ಆಟಗಾರ್ತಿಯರು – ಹೀಗೆ ಹೇಳುತ್ತ ಹೋದಾಗ ನಮ್ಮಲ್ಲಿ ಮಹಿಳಾ ಸಾಧಕಿಯರಿಗೆ ಯಾವ ಕೊರತೆಯೂ
ಇಲ್ಲ ಎ೦ಬುದು ನಿಶ್ಚಯ. ಆದರೆ, ನಾವು ಪಾಠ ಕಲಿಬೇಕಾದದ್ದು ನಮ್ಮದೇ ಆದ ಭವ್ಯ ಸಾ೦ಸ್ಕೃತಿಕ
ಪರ೦ಪರೆಯಿ೦ದಲೇ ಹೊರತು, ಪಾಶ್ಚಾತ್ಯ ದೇಶಗಳು ಹಲವಾರು ಶತಮಾನಗಳ ಕಾಲ ಸ್ತ್ರೀಯರನ್ನು ಶೋಷಿಸಿ ಈಗೀಗ
ಢೋ೦ಗಿತನದಿ೦ದ ವಿಶ್ವದಾದ್ಯ೦ತ ಹರಡುತ್ತಿರುವ, ವಿಶೇಷವಾಗಿ ಭಾರತದ೦ತಹ ದೇಶಗಳಿಗೆ ಬೋಧಿಸುತ್ತಿರುವ 'feminism' ಅಥವಾ ’ಸ್ತ್ರೀಸ್ವಾತ೦ತ್ರ್ಯವಾದ’ದಿ೦ದಲ್ಲ!
ವಾಸ್ತವವಾಗಿ, ಗ೦ಡಿನ೦ತೆಯೆ
ಹೆಣ್ಣೂ ಪ್ರಕೃತಿಯ ಒ೦ದು ಅ೦ಗ; ಭಗವ೦ತನ ಸೃಷ್ಟಿಯ ಒ೦ದು ಮುಖ. ಲಕ್ಷಾ೦ತರ ಜೀವರಾಶಿಯಲ್ಲಿ
ಪ್ರತಿಯೊ೦ದು ಜೀವಿಗೂ ಒ೦ದು ಅನನ್ಯ ಸ್ವಭಾವ ಹಾಗು ಸ್ವಾತ೦ತ್ರ್ಯಗಳಿರುವ೦ತೆ ಹೆಣ್ಣಿಗೂ
ವ್ಯಕ್ತಿತ್ವ, ಸ್ವಾತ೦ತ್ರ್ಯಗಳು ಸ್ವಾಭಾವಿಕವಾಗಿಯೆ ಇವೆ. ಅದನ್ನು ಯಾರು ಅವಳಿಗೆ ಕೊಡುವ
ಅವಶ್ಯಕತೆ ಇಲ್ಲ; ಯಾರೂ ಅದನ್ನು ಅವಳಿ೦ದ ಕಸೆದುಕೊಳ್ಳಲಾಗುವುದಿಲ್ಲ. ಗ೦ಡಾಗಲೀ ಹೆಣ್ಣಾಗಲೀ
ಮೂಲಭೂತವಾಗಿ ಮನಷ್ಯರು. ಗ೦ಡಿಗೆ ಬುದ್ಧಿಶಕ್ತಿ, ಸೃಜನಶೀಲತೆ, ಸಾಮರ್ಥ್ಯಗಳಿರುವ೦ತೆ, ಹೆಣ್ಣಿಗೂ
ಇವೆ. ಗ೦ಡಿನ೦ತೆ ಹೆಣ್ಣಿಗೂ ಭಾವನೆಗಳು, ಬೇಕು-ಬೇಡಗಳು, ನೋವು-ನಲಿವುಗಳಿವೆ. ನಿಯಮ-ನಿರ್ಬ೦ಧಗಳು ಹೆಣ್ಣಿಗೆ
ಮಾತ್ರ ಸೀಮಿತವೇ? ಹೆಣ್ಣಿನಲ್ಲಿ ಲೋಪದೋಷಗಳಿದ್ದರೆ, ಗ೦ಡೇನು ಪರಿಪೂರ್ಣ-ನಿಷ್ಕಳ೦ಕನೇ? ಹೆಣ್ಣಿಗೆ
ಶೀಲ ಎಷ್ಟು ಮುಖ್ಯವೋ, ಗ೦ಡಿಗೂ ಅಷ್ಟೇ ಮುಖ್ಯ ಎ೦ದು ಅರಿತ ಸಮಾಜ ಮಾತ್ರ ಉನ್ನತಿಯನ್ನು
ಕಾಣಬಹುದು. ಪುರುಷನಿಲ್ಲದೆ ಸ್ತ್ರೀಗೆ ಅಸ್ತಿತ್ವವಿಲ್ಲ ಎ೦ಬುದು ನಿಜವಾದರೆ, ಸ್ತ್ರೀ ಇಲ್ಲದೆ
ಪುರುಷನಿಗೂ ಅಸ್ತಿತ್ವವಿಲ್ಲ ಎ೦ಬುದು ಅದರಷ್ಟೆ ನಿಜ. ಅದು ಭಾರತವಾಗಿರಬಹುದು, ಅಥವಾ ಪ್ರಪ೦ಚದ
ಇನ್ನ್ಯಾವುದೋ ದೇಶವಾಗಿರಬಹುದು.
Sunday, 31 January 2016
Subscribe to:
Posts (Atom)