Friday, 7 September 2018

UTSAVA and PRABODHA

Namaste all! I am happy to launch two special series of videos

1. UTSAVA - videos of songs on deities pertaining to each of the festivals that are coming up (which I shall post on the respective festival days)

2. PRABODHA - series of short videos on various topics relating to Indian culture, intellectual tradition, literature and arts.
Hope you will all like this concept.
For updates, pls do like my facebook page Saturday, 26 November 2016

Misrepresentations in Pollock’s Sastra paper - 2 Paper Presentations

Here is my paper presentation titled 'Sheldon Pollock on Sastra' at the Swadeshi Indology Conference, held at IIT Chennai 6th, 7th and 8th July 2016

Click here for pdf

Monday, 7 March 2016

ಭಾರತೀಯ ಮಹಿಳೆ

-      ಕೆ. ವೃ೦ದಾ ಆಚಾರ್ಯ

ಲೋಕದಲ್ಲಿರುವ ಸ೦ಗತಿಗಳೆಲ್ಲದಕ್ಕೂ ವರ್ಷದ ಒ೦ದೊ೦ದು ದಿನವನ್ನು 'day' ಅಥವಾ ’ದಿನಾಚರಣೆ’ಯಾಗಿ ಪರಿಗಣಿಸುವ/ಆಚರಿಸುವ ಒ೦ದು ಪರಿಕಲ್ಪನೆ ಇತ್ತೀಚಿನದು. ಇ೦ದು, ಮಾರ್ಚ್ 8,ಅ೦ತರರಾಷ್ಟ್ರೀಯ ಮಹಿಳಾ ದಿನಾಚರಣೆ’! ಇದನ್ನು ಆಚರಿಸುವ ಉದ್ದೇಶ? ವರ್ಷದ ಒ೦ದು ದಿನವಾದರೂ ಮಹಿಳೆಯರೂ ಈ ಲೋಕದಲ್ಲಿ ಇದ್ದಾರೆ ಎ೦ದು ಗ೦ಡಸರಿಗೆ ಮನದಟ್ಟು ಮಾಡಲೋ, ಅಥವಾ ’ನಾವೂ ಇದ್ದೇವೆ’ ಎ೦ದು ಸ್ವಯ೦ ಮಹಿಳೆಯರೇ ಜ್ಞಾಪಿಸಿಕೊಳ್ಳಲೋ...ನಾನರಿಯೆ! ಅದೇನೇ ಇರಲಿ; ಮಹಿಳಾ ದಿನಾಚರಣೆಯ೦ದು ’ಭಾರತೀಯ ಮಹಿಳೆ’ಯ ಬಗ್ಗೆ ಒ೦ದಷ್ಟು ಚಿ೦ತನೆ...

ನಮ್ಮ ಭಾರತೀಯ ಸ೦ಸ್ಕೃತಿಯು ಶತಮಾನಗಳ ಹಿ೦ದೆಯೆ ಇಡೀ ವಿಶ್ವಕ್ಕೆ ಮಾದರಿಯಾಗಿದ್ದ೦ತಹ ಸ೦ಸ್ಕೃತಿ. ನಮ್ಮ ಈ ಸ೦ಸ್ಕೃತಿಯ ಮುಖ್ಯವಾದ ಒ೦ದು ಅ೦ಶವೆ೦ದರೆ ಸ್ತ್ರೀಯರಿಗೆ ನಮ್ಮಲ್ಲಿ ನೀಡಲಾಗುತ್ತಿದ್ದ ಸ್ಥಾನಮಾನ, ಗೌರವ, ಪ್ರಾಮುಖ್ಯತೆ. ವೈದಿಕ ಸಾಹಿತ್ಯದಲ್ಲಿ, ಸ್ಮೃತಿಗ್ರ೦ಥಗಳಲ್ಲಿ, ಇತಿಹಾಸ-ಪುರಾಣಗಳಲ್ಲಿ, ಮಹಾಮಹಿಮರ ವಾಕ್ಯಗಳಲ್ಲಿ ಸ್ತ್ರೀಯ ಕುರಿತಾದ ಅಭಿಪ್ರಾಯಗಳು ಅತ್ಯ೦ತ ಉಚಿತವೂ ಹೃದ್ಯವೂ ಆಗಿವೆ.        
  • “ಯತ್ರ ನಾರ್ಯಾಸ್ತು ಪೂಜ್ಯ೦ತೇ ರಮ೦ತೇ ತತ್ರ ದೇವತಾಃ” - ಮನುಸ್ಮೃತಿ
  • “ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ” – ತಾಯಿ ಹಾಗು ತಾಯಿನಾಡು ಸ್ವರ್ಗಕ್ಕಿ೦ತಲೂ ಶ್ರೇಷ್ಠವಾದುವು – ಶ್ರೀಮದ್ರಾಮಾಯಣದಲ್ಲಿ ಶ್ರೀರಾಮ
  • ದೇಶವನ್ನು ಆಳುವುದರಲ್ಲಿ, ವಿಧಾನ ಮ೦ಡಲಗಳಲ್ಲಿ, ಸಾಮಾಜಿಕ ಕಾರ್ಯಗಳಲ್ಲಿ ಹಾಗು ಸರ್ಕಾರೀ ಸ೦ಸ್ಥೆಗಳಲ್ಲಿ ಸ್ತ್ರೀಯರು ಸಕ್ರಿಯವಾಗಿ ಭಾಗವಹಿಸಬೇಕು – ಋಗ್ವೇದ
  • ಸ್ತ್ರೀಯರು ಪರಾಕ್ರಮಿಗಳಾಗಿದ್ದು ಯುದ್ಧದಲ್ಲಿ ಭಾಗವಹಿಸಬೇಕು – ಯಜುರ್ವೇದ
  • ಸ್ತ್ರೀಯರು ವಿದ್ಯೆ, ಪಾ೦ಡಿತ್ಯ, ಪರಿಣತಿಗಳನ್ನು ಪಡೆದು ಕೀರ್ತಿ-ಸ೦ಪತ್ತುಗಳನ್ನು ಗಳಿಸಿಕೊಳ್ಳಬೇಕು - ಅಥರ್ವವೇದ
  • ತ೦ದೆಯ ಆಸ್ತಿಯಲ್ಲಿ ಮಗನ೦ತಯೇ ಮಗಳಿಗೂ ಹಕ್ಕು ಇದೆ – ಧರ್ಮಸೂತ್ರಗಳು
  • ಸ್ತ್ರೀಯರಿಗೆ ವಿವಾಹ ವಿಚ್ಛೇದನ ಪಡೆದು ಪುನರ್ವಿವಾಹವಾಗುವ ಹಕ್ಕು, ವಿಧವಾ ಪುನರ್ವಿವಾಹ, ಸ್ವೇಚ್ಛೆಯಿ೦ದ ವಿವಾಹವಾಗುವ ಸ್ವಾತ೦ತ್ರ್ಯವಿದೆ – ಅರ್ಥಶಾಸ್ತ್ರದಲ್ಲಿ ಚಾಣಕ್ಯ
  • “ಸ್ತ್ರೀಯೋ ಹಿ ನಾಮ ಖಲ್ವೇತಾ ನಿಸರ್ಗಾದೇವ ಪ೦ಡಿತಾಃ | ಪುರುಷಾಣಾ೦ ತು ಪಾ೦ಡಿತ್ಯ೦ ಶಾಸ್ತ್ರೈರೇವೋಪದಿಶ್ಯತೇ ||” - ಸ್ತ್ರೀಯರು ಸ್ವಾಭಾವಿಕವಾಗಿಯೇ ಪ೦ಡಿತರು. ಆದರೆ ಪುರುಷರಿಗೆ ಶಾಸ್ತ್ರಗಳ ಉಪದೇಶದಿ೦ದಲೇ ಪಾ೦ಡಿತ್ಯವು ದೊರಕುತ್ತದೆ – ಮೃಚ್ಛಕಟಿಕಮ್ ನಾಟಕದಲ್ಲಿ ಕವಿ ಶೂದ್ರಕ
  • "The best thermometer to the progress of a nation is its treatment of its women." - ಸ್ವಾಮಿ ವಿವೇಕಾನ೦ದ
  • ಮನೆಯೆ ಮೊದಲ ಪಾಠಶಾಲೆ; ಜನನಿ ತಾನೆ ಮೊದಲ ಗುರುವು – ಪ್ರಸಿದ್ಧ ಲೋಕೋಕ್ತಿ
    
ವೇದ, ಶಾಸ್ತ್ರ, ಕಲೆ, ಸಾಹಿತ್ಯ, ವಿಜ್ಞಾನ, ಅರ್ಥಶಾಸ್ತ್ರ, ಶಿಕ್ಷಣ, ರಾಜಕೀಯ ಮು೦ತಾದ ಹಲವಾರು ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡುವುದಲ್ಲದೇ ಸಮಾಜ ಹಾಗು ದೇಶಕ್ಕಾಗಿ ತಮ್ಮನ್ನೇ ಅರ್ಪಿಸಿಕೊ೦ಡ೦ತಹ ಹಲವಾರು ಸ್ತ್ರೀಯರು ನಮ್ಮಲ್ಲಿ ಹಿ೦ದೂ ಇದ್ದರು, ಈಗಲೂ ಇದ್ದಾರೆ. ಭಾರತೀಯ ಮಹಿಳೆಯು ಪ್ರಾಯಶಃ ವಿಶ್ವದ ಯಾವುದೇ ಮಹಿಳೆಗಿ೦ತ ಹೆಚ್ಚು ಧಾರ್ಮಿಕಳು ಹಾಗು ಆಧ್ಯಾತ್ಮಿಕಳು. ವೇದೋಪನಷತ್ತುಗಳಲ್ಲಿ ಪ್ರತಿಪಾದ್ಯವಾದ ಸತ್ಯವನ್ನು ಗ೦ಡಿನ೦ತೆಯೇ, ಸ್ವತ೦ತ್ರವಾಗಿ ಕ೦ಡುಕೊಳ್ಳಬಲ್ಲಳು. ವೇದಕಾಲೀನ ಸ್ತ್ರೀಯರು ಅ೦ದಿನ ಸಮಾಜದ ಎಲ್ಲ ಕಾರ್ಯಕ್ಷೇತ್ರಗಳಲ್ಲೂ ಪುರುಷರಿಗೆ ಸರಿಸಮನಾದ ದರ್ಜೆಯನ್ನು ಪಡೆದಿದ್ದರು. ಸ್ತ್ರೀಯರಿಗೆ ಯಾವ ಭೇದವಿಲ್ಲದೆ ವೈದಿಕ ಶಿಕ್ಷಣ, ಉಪನಯನಾದಿ ಸ೦ಸ್ಕಾರಗಳನ್ನು ಮಾಡಲಾಗುತ್ತಿತ್ತು. ಪ್ರಾಚೀನ ಭಾರತೀಯ ಸಾಹಿತ್ಯದಲ್ಲಿ ಹಲವಾರು ಕಡೆ ಸ್ತ್ರೀಯರು ಶಿಕ್ಷಣವನ್ನು ನೀಡುವ, ಕಲೆ-ಸಾಹಿತ್ಯಗಳಲ್ಲಿ ಪರಿಣತರಾಗಿರುವ, ವ್ಯಾಪಾರ ಮಾಡುವ, ರಾಜ್ಯಭಾರ ಮಾಡುವ, ಯುದ್ಧದಲ್ಲಿ ಭಾಗವಹಿಸುವ, ಅವಿವಾಹಿತರಾಗಿದ್ದು ಆಧ್ಯಾತ್ಮಸಾಧನೆಯಲ್ಲಿ ತೊಡಗಿಕೊ೦ಡಿರುವ, ಇತ್ಯಾದಿ ಉಲ್ಲೇಖಗಳು ಕ೦ಡುಬರುತ್ತವೆ. ರಾಮಾಯಣ, ಮಹಾಭಾರತ ಕಾಲದ ನಾರಿಯರಾದ ಸೀತೆ, ದ್ರೌಪದೀ, ದಮಯ೦ತೀ, ಶಕು೦ತಲೆಯರು ಅತ್ಯ೦ತ ಪ್ರಬುದ್ಧೆಯರು, ವಿದ್ಯಾವ೦ತೆಯರು ಆಗಿದ್ದುದಲ್ಲದೆ, ಸ್ವಯ೦ವರ ಪದ್ಧತಿ ಅಥವಾ ಗ೦ಧರ್ವ ವಿವಾಹ ಪದ್ಧತಿಯ೦ತೆ ತಮ್ಮ ಪತಿಯರನ್ನು ತಾವೇ ಆರಿಸಿಕೊಳ್ಳುವ ಸ್ವಾತ೦ತ್ರ್ಯವನ್ನು ಪಡೆದಿದ್ದರು. ಋಗ್ವೇದ ಕಾಲದ ಅ೦ಬ್ರಣೀ (ವಾಕ್) ಯ೦ತಹ ಮ೦ತ್ರದ್ರಷ್ಟಾರರು; ಗಾರ್ಗೀ, ಮೈತ್ರೇಯೀ, ಯಮೀ, ಅಪಾಲಾ, ಇ೦ದ್ರಾಣೀಯ೦ತಹ ದಾರ್ಶನಿಕ ಮಹಿಳೆಯರು; ಶ೦ಕರಾಚಾರ್ಯರು ಹಾಗು ಮ೦ಡನಮಿಶ್ರನ ತಾತ್ತ್ವಿಕ ವಾಗ್ವಾದಕ್ಕೆ ತೀರ್ಪುಗಾರ್ತಿಯಾದ ಉಭಯಭಾರತೀಯ೦ತಹ ಧೀಮ೦ತ ವಿದುಷಿಯರು ಮತ್ತಾವ ದೇಶದಲ್ಲೂ ನಮಗೆ ಸಿಗಲಾರರು. ಅ೦ತೆಯೇ, ಆ೦ಡಾಳ್, ಮೀರಾ, ಸಕ್ಕೂಬಾಯಿ, ಮುಕ್ತಾಬಾಯಿ, ಹೆಳವನಕಟ್ಟೆ ಗಿರಿಯಮ್ಮ, ಅಕ್ಕಮಹಾದೇವಿಯ೦ತಹ ಸ೦ತ ವಾಗ್ಗೇಯಕಾರ್ತಿಯರನ್ನು; ಕೈಕೇಯಿ, ಝಾ೦ಸಿ ಲಕ್ಷ್ಮೀಬಾಯಿ, ಕೆಳದಿ ಚೆನ್ನಮ್ಮ, ಕಿತ್ತೂರು ಚೆನ್ನಮ್ಮರ೦ತಹ ಧೀರ ಯೋಧ ಮಹಿಳೆಯರನ್ನು; ಅವ೦ತೀಸು೦ದರಿ, ಅವ್ವಯ್ಯಾರ್ ರ೦ತಹ ಕವಯಿತ್ರಿಯರನ್ನು ವಿಶ್ವಕ್ಕೆ ಕೊಟ್ಟ೦ತಹ ದೇಶ ನಮ್ಮದು. ತ೦ಜಾವೂರನ್ನು ಆಳಿದ ನಾಯಕ ರಾಜವ೦ಶದ ದೊರೆ ರಘುನಾಥನಾಯಕನ ಪತ್ನಿ ರಾಮಭದ್ರಾ೦ಬಾ ’ರಘುನಾಥಾಭ್ಯುದಯಮ್’ ಎ೦ಬ ಮಹಾಕಾವ್ಯವನ್ನು ರಚಿಸಿದ ಒಬ್ಬ ಅಸಾಧಾಣವಾದ ಸ೦ಸ್ಕೃತ ವಿದುಷಿಯಾಗಿದ್ದಳೆ೦ದೂ, ಹಾಗು ಅವನ ಅಸ್ಥಾನದಲ್ಲಿ ಸುಖವಾಣಿ ಎ೦ಬ ಉತ್ಕೃಷ್ಟ ಮಟ್ಟದ ವೈಣಿಕೆಯು ಇದ್ದಳೆ೦ದೂ ತಿಳಿದುಬರುತ್ತದೆ.

ಇಲ್ಲಿ ನಾವು ಸಾಧನೆಯ೦ಬುದರ ಇನ್ನೊ೦ದು ಮುಖವನ್ನೂ ಪರಿಗಣಿಸಬೇಕಾಗಿದೆ. ದೈನ೦ದಿನ ಜೀವನದಲ್ಲಿ ಒಬ್ಬ ಹೆಣ್ಣು ಮಾಡುವ ಕೆಲಸಗಳು, ನಿರ್ವಹಿಸುವ ಜವಾಬ್ದಾರಿಗಳು, ಎದುರಿಸುವ ಸವಾಲುಗಳು, ವಿಚಾರವ೦ತಿಕೆಯಿ೦ದ ತೆಗೆದುಕೊಳ್ಳುವ ನಿರ್ಧಾರಗಳು ಎಲ್ಲವೂ ಸಾಧನೆಯೇ. ಒಬ್ಬ ತಾಯಿಯಾಗಿ, ಪತ್ನಿಯಾಗಿ, ಸಹೋದರಿಯಾಗಿ, ಪುತ್ರಿಯಾಗಿ ಗ೦ಡಿನ, ತನ್ನ ಪರಿವಾರದ, ತನ್ಮೂಲಕ ಇಡಿಯ ಸಮಾಜದ ಆರೋಗ್ಯಕರ ಏಳಿಗೆಗೆ ಕಾರಣಳಾಗುತ್ತಾಳೆ. ನಮ್ಮ ಸನಾತನ ಧರ್ಮ ಅಥವಾ ಹಿ೦ದೂ ಸ೦ಸ್ಕೃತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಹುಟ್ಟಿನಿ೦ದ ಪ್ರಾರ೦ಭಿಸಿ ಕೊನೆಯವರೆಗೆ ಸಾವಿರಾರು ಸಮಾರ೦ಭಗಳನ್ನು, ಉತ್ಸವಗಳನ್ನು, ಪೂಜೆಪುನಸ್ಕಾರಗಳನ್ನು ಮಾಡಲಾಗುತ್ತದೆ. ಅವುಗಳಲ್ಲಿ ಯಾವುದೊ೦ದನ್ನೂ ಸ್ತ್ರೀಯ ಅನುಪಸ್ಥಿತಿಯಲ್ಲಿ ಮಾಡಲು ಆಗುವುದಿಲ್ಲ. ಇವತ್ತಿಗೂ, ನಮ್ಮ ಕೌಟು೦ಬಿಕ ಪದ್ಧತಿಯಲ್ಲಿ ಗೋತ್ರಾದಿಗಳ ನಿರ್ಣಯವು ಪಿತೃಮೂಲವಾಗಿದ್ದರೂ(patriarchal family system), ತ೦ದೆಗಿ೦ತ ತಾಯಿಗೇ ಹೆಚ್ಚಿನ ಸ್ಥಾನ. ಮಕ್ಕಳು ಚಿಕ್ಕವರಿದ್ದಾಗ ತಾಯಿಯ ಮರಣವಾದರೆ, ಮಕ್ಕಳಿಗೆ ಉತ್ತಮ ಸ೦ಸ್ಕಾರ ಸಿಗುವ ಮಾತು ಹಾಗಿರಲಿ, ಮಕ್ಕಳ ಪಾಲನೆ-ಪೋಷಣೆಗಳೇ ದೊಡ್ಡ ಸಮಸ್ಯೆಯಾಗುತ್ತದೆ. ಆದರೆ ತ೦ದೆಯ ಮರಣವಾದರೆ, ತಾಯಿಯು ದಿಟ್ಟತನದಿ೦ದ ಜೀವನವನ್ನು ಎದುರಿಸಿ ಒ೦ಟಿಯಾಗಿ ಮಕ್ಕಳನ್ನೂ ಬೆಳೆಸುತ್ತಾಳೆ. ಇದಕ್ಕೆ ಕಾರಣ ಪ್ರಕೃತಿಯ ಹೆಣ್ಣಿಗೆ ಕೊಟ್ಟ೦ತಹ ತಾಳ್ಮೆ, ಉದಾರತೆ, ವಾತ್ಸಲ್ಯ, ಸಹಿಷ್ಣುತೆ, ವಿವೇಕ, ಮನೋಬಲ ಮು೦ತಾದ ಅಪೂರ್ವ ಗುಣಗಳು. ಇದನ್ನು ಭಾರತೀಯರು ಬಹಳ ಹಿ೦ದೆಯೆ ಮನಗ೦ಡಿದ್ದರು. ಹಿ೦ದೂ ಧರ್ಮದಲ್ಲಿ ಮದುವೆಯಾಗದ ಪುರುಷನು ಅಪೂರ್ಣನು ಎ೦ಬ ನ೦ಬಿಕೆಯ ಕಾರಣದಿ೦ದಾಗಿ, ಒಬ್ಬ ವ್ಯಕ್ತಿಯು ಪುರೋಹಿತನಾಗಬೇಕಾದರೆ, ಆತ ಕಡ್ಡಾಯವಾಗಿ ವಿವಾಹಿತನಾಗಿರಲೇ ಬೇಕು. ನಮ್ಮ ದೇಶದಲ್ಲಿ ’ಸೀತಾರಾಮ’, ’ರಾಧಾಕೃಷ್ಣ’, ’ಗೌರೀಶ೦ಕರ’, ’ಲಕ್ಷ್ಮೀನಾರಾಯಣ’ – ಹೀಗೆ ವ್ಯವಹರಿಸುವ ಪದ್ಧತಿಯು ಕ೦ಡುಬರುತ್ತದೆಯೇ ಹೊರತು, ’ರಾಮಸೀತೆ’, ’ಶ೦ಕರಗೌರೀ’ ಇತ್ಯಾದಿ ಎ೦ದಲ್ಲ. ಅ೦ತೆಯೇ, ದ೦ಪತಿಗಳನ್ನು ಸ೦ಬೋಧಿಸುವಾಗ “ಶ್ರೀಮತಿ ಮತ್ತು ಶ್ರೀ” ಎ೦ದೇ ಬಳಸಲಾಗುತ್ತದೆ. ಹಾಗಾಗಿ, ಎಲ್ಲ ವಿಧವಾದ ಆಚರಣೆಗಳಲ್ಲೂ ಹೆಣ್ಣಿಗೇ ಪ್ರಮುಖ ಸ್ಥಾನ.

ಪ್ರಾಚೀನ ಕಾಲದಲ್ಲಿ ಭಾರತೀಯ ಸ್ತ್ರೀಯರಿಗೆ ಇದ್ದ೦ತಹ ಒ೦ದು ಹಿರಿಮೆ ಪ್ರಪ೦ಚದ ಇತರ ರಾಷ್ಟ್ರಗಳಲ್ಲಿ ಇರಲಿಲ್ಲ ಎ೦ಬುದಕ್ಕೆ ನಮಗೆ ಇಸಿಹಾಸವೇ ಪ್ರಮಾಣ. ಯೂರೋಪೀ ದಾರ್ಶನಿಕರಾದ ಆರಿಸ್ಟಾಟಲ್, ದಿಕಾರ್ತೆ, ಲೆಬ್ನಿಸ್, ಮು೦ತಾದವರ ಪ್ರತಿಪಾದಿಸಿದ ಸ್ತ್ರೀಸಿಧಾ೦ತವು ಭಯ೦ಕರವೂ, ಅತಿನಿಕೃಷ್ಟವೂ ಆಗಿದೆ. ಕ್ರೈಸ್ತಮತ, ಜುಡಾಯಿಸಮ್ ಹಾಗು ಇಸ್ಲಾಮ್ ಮತಗಳ ಮೂಲ ತತ್ತ್ವಗಳಲ್ಲಿ ಹೆಣ್ಣನ್ನು ಗ೦ಡಿಗಿ೦ತ ಕೀಳಾಗಿಯೇ ಚಿತ್ರಿಸಲಾಗಿದೆ. ಹೆಣ್ಣು ಎ೦ಬುದು ಗ೦ಡಿನ ಸೇವೆ ಹಾಗು ಉಪಭೋಗಕ್ಕಾಗಿ ಇರುವ ಕೇವಲ ಒ೦ದು ವಸ್ತು ಎ೦ದು ಭಾವಿಸಲಾಗಿತ್ತು. ಸುಮಾರು 19ನೆಯ ಶತಮಾನದ ಮಧ್ಯಭಾಗದ ವರೆಗೂ ಯೂರೋಪ್ ಹಾಗು ಅಮೇರಿಕಾಗಳಲ್ಲಿ ಹೆ೦ಗಸರಿಗೆ ಮತಾಧಿಕಾರವೇ ಇರಲಿಲ್ಲ. ಇದರ ವಿರುದ್ಧ Women’s Suffrage Movement ಎ೦ಬ ಹೆಸರಿನಲ್ಲಿ ಹಲವಾರು ವರ್ಷಗಳ ಕಾಲ ಕ್ರಾ೦ತಿಗಳು ನದೆಯುತ್ತಲೇ ಇದ್ದವು. ಅನೇಕ ಶತಮಾನಗಳ ಕಾಲ ಯೂರೋಪಿನ ನ್ಯಾಯಾಲಯಗಳಲ್ಲಿ (ವಿಶೇಷವಾಗಿ ರೋಮ್ ಹಾಗು ಗ್ರೀಸ್), ಎರಡು ಅಥವಾ ಮೂರು ಮಹಿಳೆಯರ ಸಾಕ್ಷಿಯು ಒಬ್ಬ ಪುರುಷನ ಸಾಕ್ಷಿಗೆ ಸಮಾನವೆ೦ದು ಪರಿಗಣಿಸಲಾಗುತ್ತಿತ್ತು.  ಮಹಿಳೆಯರಿಗೆ ಸ್ವತ೦ತ್ರವಾಗಿ ತಮ್ಮ ಹೆಸರಿನಲ್ಲಿ ಬ್ಯಾ೦ಕ್ ಖಾತೆಯನ್ನು ತೆರೆಯುವ ಹಕ್ಕೂ ಇರಲಿಲ್ಲ. 'Bride Price' ಎ೦ಬ ಹೆಸರಿನಲ್ಲಿ ವರದಕ್ಷಿಣೆಯ೦ತಹ ಘೋರ ಸಾಮಾಜಿಕ ಕೆಡುಕು ಪ್ರಾಚೀನ ರೋಮ್ ಹಾಗು ಬ್ಯಾಬಿಲೋನ್ ದೇಶಗಳಲ್ಲಿ ಪ್ರಚಲಿತವಾಗಿತ್ತು. ಇ೦ದಿಗೂ ಕೆಲವು ಅರಬ್ ದೇಶಗಳಲ್ಲಿ ಹೆಣ್ಣಿಗೆ ಯಾವ ದರ್ಜೆಯನ್ನು ನೀಡಲಾಗುತ್ತದೆ ಎ೦ಬುದು ಸರ್ವವಿದಿತವೇ ಆಗಿದೆ.

ನಮ್ಮ ಉತ್ಕೃಷ್ಟವಾದ ಸ೦ಸ್ಕೃತಿ, ಸಮೃದ್ಧವಾದ ಜ್ಞಾನಭ೦ಡಾರ ಹಾಗು ಅಪಾರವಾದ ಸ೦ಪತ್ತುಗಳ ಕಾರಣದಿ೦ದಾಗಿ ನಮ್ಮ ದೇಶವು ಹಲವಾರು ವಿದೇಶೀ ಆಕ್ರಮಣಗಳಿಗೆ ಒಳಪಟ್ಟಿತು. ಬಹುತೇಕ ಅನಾಗರಿಕ ಜನಾ೦ಗಗಳನ್ನೇ ಒಳಗೊ೦ಡ ಪ್ರತಿಯೊ೦ದು ವಿದೇಶೀ ಶಕ್ತಿಯೂ ನಮ್ಮ ಜ್ಞಾನ ಸ೦ಪತ್ತು ಹಾಗು ಲೌಕಿಕ ಸ೦ಪತ್ತುಗಳನ್ನು ದೋಚುವುದರಲ್ಲಿ, ಅ೦ತೆಯೇ ನಮ್ಮ ಸ೦ಸ್ಕೃತಿಯನ್ನು, ಸನಾತನ ಧರ್ಮದ ಮೂಲ ಸಿದ್ಧಾ೦ತಗಳನ್ನು ನಾಶಪಡಿಸುವುದರಲ್ಲಿ ತನ್ನದೇ ಆದ ರೀತಿಯಲ್ಲಿ ಕೆಲಸಮಾಡತೊಡಗಿತು. ನಮ್ಮಲ್ಲಿ ಅತ್ಯ೦ತ ಕಡಿಮೆ ಪ್ರಮಾಣದಲ್ಲಿ ಅಲ್ಲಲ್ಲಿ ಇದ್ದ ಕೆಲವು ಸಾಮಾಜಿಕ ಹಾಗು ಧಾರ್ಮಿಕ ದೋಷಗಳನ್ನು ಬೃಹದಾಕಾರವಾಗಿ ಚಿತ್ರಿಸಿ ಲೋಕಕ್ಕೆ ತೋರಿಸಲಾಯಿತು. ನಮ್ಮ ಸ೦ಸ್ಕೃತಿಯಲ್ಲಿ ಎಲ್ಲವೂ ಅನರ್ಥಕ ಹಾಗು ಅಸಮ೦ಜಸ ಎ೦ದು ನಾವೇ ದೃಢವಾಗಿ ನ೦ಬಿ ಕೀಳರಿಮೆಯನ್ನು ಅನುಭವಿಸುವಷ್ಟು ನಮಗೇ ಬೋಧಿಸಲಾಯಿತು. ಜೊತೆಗೆ ಈ ಎಲ್ಲ ವಿದೇಶೀ ಅನ್ಯಮತಗಳ ಹಾವಳಿಯಿ೦ದಾಗಿ, ವಿದೇಶೀ ಆಚಾರ-ವಿಚಾರ-ಜೀವನಶೈಲಿಗಳ ಪ್ರಭಾವದಿ೦ದಾಗಿ ಬಹಳಷ್ಟು ಮಟ್ಟಿಗೆ ನಾವೂ ನಮ್ಮ ನೈತಿಕ ಮಟ್ಟವನ್ನು ಕಳೆದುಕೊ೦ಡೆವು; ಪರಾಧೀನರಾದೆವು; ನಮ್ಮಲ್ಲಿ ಸಾ೦ಸ್ಕೃತಿಕ ಅಧ೦ಪತನವಾಯಿತು. ಇದರ ಒ೦ದು ಪರಿಣಾಮವೆ೦ದರೆ, ಕಳೆದ ಕೆಲವು ಶತಮಾನಗಳಿ೦ದ ನಮ್ಮಲ್ಲಿ ಕು೦ಠಿತವಾದ ಸ್ತ್ರೀಯರ ಸ್ಥಾನಮಾನ ಹಾಗು ಹೆಚ್ಚಾದ ಸ್ತ್ರೀಶೋಷಣೆ.

ಆದರೆ, ಕಳೆದ ಸುಮಾರು 80-100 ವರ್ಷಗಳಲ್ಲಿ ಹಲವಾರು ಸಮಾಜ ಸುಧಾರಕರ ಹೋರಾಟದ ಫಲವಾಗಿ ಭಾರತೀಯ ಮಹಿಳೆಯರ ಪರಿಸ್ಥಿತಿ ಬಹಳಷ್ಟು ಸುಧಾರಿಸಿದೆ. ಆಧುನಿಕ ಭಾರತೀಯ ಮಹಿಳೆಯು ಪ್ರಾಚೀನ ಭಾರತೀಯ ಮಹಿಳೆಯ ಪ್ರತಿಬ೦ಬ. ಆಕೆಯ ಸಾಧನೆಗಳು ಅಪರಿಮಿತವೂ, ಅಪೂರ್ವವೂ ಆಗಿದೆ. ಎ೦.ಎಸ್. ಸುಬ್ಬುಲಕ್ಶ್ಮೀ, ಪದ್ಮಾ ಸುಬ್ರಹ್ಮಣ್ಯ೦ ರ೦ತಹ ಕಲಾವಿದೆಯರು, ಸರೋಜಿನಿ ನಾಯ್ಡು ರ೦ತಹ ಕವಯಿತ್ರಿಯರು, ಜಾನಕೀ ಅಮ್ಮಾಳ್ ರ೦ತಹ ಸ೦ಶೋಧಕಿಯರು, ಕಿರಣ್ ಬೇಡಿಯ೦ತಹ ದಕ್ಷ ಮಹಿಳಾ ಅಧಿಕಾರಿಯರು, ಕಿರಣ್ ಮಜುಮ್ದಾರ್ ಶಾಹ್ ರ೦ತಹ ಮಹಿಳಾ ಉದ್ಯಮಿಗಳು, ಕಲ್ಪನಾ ಚಾವ್ಲಾರ೦ತಹ ಗಗನಯಾತ್ರಿಕೆಯರು, ಪಿ.ಟಿ. ಉಷಾ, ಸಾಯ್ನಾ ನೆಹ್ವಾಲ್ ರ೦ತಹ ಆಟಗಾರ್ತಿಯರು – ಹೀಗೆ ಹೇಳುತ್ತ ಹೋದಾಗ ನಮ್ಮಲ್ಲಿ ಮಹಿಳಾ ಸಾಧಕಿಯರಿಗೆ ಯಾವ ಕೊರತೆಯೂ ಇಲ್ಲ ಎ೦ಬುದು ನಿಶ್ಚಯ. ಆದರೆ, ನಾವು ಪಾಠ ಕಲಿಬೇಕಾದದ್ದು ನಮ್ಮದೇ ಆದ ಭವ್ಯ ಸಾ೦ಸ್ಕೃತಿಕ ಪರ೦ಪರೆಯಿ೦ದಲೇ ಹೊರತು, ಪಾಶ್ಚಾತ್ಯ ದೇಶಗಳು ಹಲವಾರು ಶತಮಾನಗಳ ಕಾಲ ಸ್ತ್ರೀಯರನ್ನು ಶೋಷಿಸಿ ಈಗೀಗ ಢೋ೦ಗಿತನದಿ೦ದ ವಿಶ್ವದಾದ್ಯ೦ತ ಹರಡುತ್ತಿರುವ, ವಿಶೇಷವಾಗಿ ಭಾರತದ೦ತಹ ದೇಶಗಳಿಗೆ ಬೋಧಿಸುತ್ತಿರುವ 'feminism' ಅಥವಾ ’ಸ್ತ್ರೀಸ್ವಾತ೦ತ್ರ್ಯವಾದ’ದಿ೦ದಲ್ಲ!

ವಾಸ್ತವವಾಗಿ, ಗ೦ಡಿನ೦ತೆಯೆ ಹೆಣ್ಣೂ ಪ್ರಕೃತಿಯ ಒ೦ದು ಅ೦ಗ; ಭಗವ೦ತನ ಸೃಷ್ಟಿಯ ಒ೦ದು ಮುಖ. ಲಕ್ಷಾ೦ತರ ಜೀವರಾಶಿಯಲ್ಲಿ ಪ್ರತಿಯೊ೦ದು ಜೀವಿಗೂ ಒ೦ದು ಅನನ್ಯ ಸ್ವಭಾವ ಹಾಗು ಸ್ವಾತ೦ತ್ರ್ಯಗಳಿರುವ೦ತೆ ಹೆಣ್ಣಿಗೂ ವ್ಯಕ್ತಿತ್ವ, ಸ್ವಾತ೦ತ್ರ್ಯಗಳು ಸ್ವಾಭಾವಿಕವಾಗಿಯೆ ಇವೆ. ಅದನ್ನು ಯಾರು ಅವಳಿಗೆ ಕೊಡುವ ಅವಶ್ಯಕತೆ ಇಲ್ಲ; ಯಾರೂ ಅದನ್ನು ಅವಳಿ೦ದ ಕಸೆದುಕೊಳ್ಳಲಾಗುವುದಿಲ್ಲ. ಗ೦ಡಾಗಲೀ ಹೆಣ್ಣಾಗಲೀ ಮೂಲಭೂತವಾಗಿ ಮನಷ್ಯರು. ಗ೦ಡಿಗೆ ಬುದ್ಧಿಶಕ್ತಿ, ಸೃಜನಶೀಲತೆ, ಸಾಮರ್ಥ್ಯಗಳಿರುವ೦ತೆ, ಹೆಣ್ಣಿಗೂ ಇವೆ. ಗ೦ಡಿನ೦ತೆ ಹೆಣ್ಣಿಗೂ ಭಾವನೆಗಳು, ಬೇಕು-ಬೇಡಗಳು, ನೋವು-ನಲಿವುಗಳಿವೆ. ನಿಯಮ-ನಿರ್ಬ೦ಧಗಳು ಹೆಣ್ಣಿಗೆ ಮಾತ್ರ ಸೀಮಿತವೇ? ಹೆಣ್ಣಿನಲ್ಲಿ ಲೋಪದೋಷಗಳಿದ್ದರೆ, ಗ೦ಡೇನು ಪರಿಪೂರ್ಣ-ನಿಷ್ಕಳ೦ಕನೇ? ಹೆಣ್ಣಿಗೆ ಶೀಲ ಎಷ್ಟು ಮುಖ್ಯವೋ, ಗ೦ಡಿಗೂ ಅಷ್ಟೇ ಮುಖ್ಯ ಎ೦ದು ಅರಿತ ಸಮಾಜ ಮಾತ್ರ ಉನ್ನತಿಯನ್ನು ಕಾಣಬಹುದು. ಪುರುಷನಿಲ್ಲದೆ ಸ್ತ್ರೀಗೆ ಅಸ್ತಿತ್ವವಿಲ್ಲ ಎ೦ಬುದು ನಿಜವಾದರೆ, ಸ್ತ್ರೀ ಇಲ್ಲದೆ ಪುರುಷನಿಗೂ ಅಸ್ತಿತ್ವವಿಲ್ಲ ಎ೦ಬುದು ಅದರಷ್ಟೆ ನಿಜ. ಅದು ಭಾರತವಾಗಿರಬಹುದು, ಅಥವಾ ಪ್ರಪ೦ಚದ ಇನ್ನ್ಯಾವುದೋ ದೇಶವಾಗಿರಬಹುದು. 

Friday, 10 July 2015

My Recent article on MLV for the esteemed music magazine Lalitha Kala Tarangini (of Sri Rama Lalitha Kala Mandira)


MLV – the master musician


- K. Vrinda Acharya

I feel blessed to write about none other than Dr. M.L. Vasanthakumari (1928-1990), one of the outstanding musicians the Carnatic music world has ever seen. More so because, we are celebrating my guru Vid. Neela Ramgopal mami’s 80th birthday and MLV is mami’s ‘manasika guru’.

MLV was born in a musically and culturally rich family. Her parents Kuthanur Ayya Swamy Iyer and Lalithangi were noted musicians. MLV was naturally inclined to singing, and learnt many Dasa keertanas from her mother. She became the first disciple of the legendary vidwan G.N. Balasubramaniam. She would absorb her gurus’s guidance like a blotter, soaking up every nuance.

Though she mostly followed GNB’s bani, she was known for her distinct inimitable ‘MLV style’ which kept her rasikas mesmerized and spellbound. According to GNB himself as quoted in Sruti magazine, “Vasanthi typifies real discipleship. She applies her mind to all she absorbs and presents a glorious edifice of her own creation.” Nevertheless, her music was as bold and courageous as her guru’s. She was a true spontaneous musician, who, they say, would never practice before the concert. She indeed had no fear of the stage or of experimentation and improvisation on the spot. Her music had high energy and enormous imagination. It was more intellectual and rich with brilliant manodharma, than emotional. Lightening birgas, leisurely methodical development of ragas, elaborating unusual ragas like Andolika, Kapinarayani, Pushpalathika, Salagabhairavi, Devamanohari, Sarangatharangini, Gamanashrama and the like with a free-flowing ease, fluent voice that could traverse three octaves, highly imaginative and adventurous sangathis, scintillating shruti bhedam essays, scholarly RTPs are some of the hallmarks of MLV’s music. 

MLV’s style of raga exposition was special. Following GNB’s patented style, she would first give a quick flashy sketch of the raga before settling down for a detailed step-by-step elaboration (particularly for RTPs). Given her perfect and comprehensive voice technique, she could produce any gamaka, birga or voice modulation with absolute control and melody. For instance, in Shanmukhapriya, she would sing unbelievably fast birgas from mandrasthayi panchamam to tarasthayi rishabham; in Hindolam from mandra madhyamam to tara madhyamam and in Shubhapantuvarali from mandra panchamam to tara panchamam, so perfect and tuneful. Her sa-pa varjya prayogams in Kalyani or Todi, and phrases like DNRN,DP, in Keeravani for instance were soul-stirring. Her occasional use of the straight gandharam in Todi would always give special feel. She would normally decorate the descent of her ragalapana with three meaningful parallel phrases like MG,RSN-SN,DPM-MG,RSN or RGRSND-DNDPMG-RGRSND or S,SR,SD,P-P,PD,PG,R- S,SR,SD,P. 

Shruti bhedam is like tight rope walking. It requires concentration and expertise of a high order with respect to shrutis and swaras. A slip can easily land the musician in an abyss of apaswaram. Like her guru, MLV had a penchant for Shruti bhedam. A detailed Shankarabharanam would see her foraying into Kalyani in a flash. Similarly, she would beautifully bring Todi in Kharaharapriya. Not just changing the ragam, but coming back to the original ragam was equally a thrilling experience for the audience. 

MLV’s concerts were known for their brilliant and efforless Ragam-Tanam-Pallavis. One cannot but be amazed at the unimaginable mastery she exhibited in all aspects of pallavi singing. As for her control on laya, it was perfection personified. She has presented pallavis in complicated talas such as mishramukhi. ‘Kanaka Sabesha Jagadeesha Natana Prakasha’ in Shuddhadhanyasi, khanda triputa talam 3 kalai (tishra nadai), ‘Kamalasani sundari chandravadani karunarasa vilochani’ in Shanmukhapriya Adi talam 4 kalai ateeta eduppu are some pallavis of hers that the music fraternity will always treasure.

MLV was also outstanding in niraval, tanam and swaraprastara. She was inspiringly creative and original, striking surprising swara combinations with incredible fluidity. Her prayogams were inadvertent products of a fertile imagination, making it difficult for accompanists to follow. She was sure to steal the show with her ragamalika swaras, be it ragas like Kanada, Kedaram, Yadukulakambhoji and Sahana, or rarer ones like Tilang, Revati, Kalavati and Chandrakauns.

Her laya prowess was so exceptional that Mridangam Maestro Vidwan Palghat Mani Iyer accompanied her in some concerts. She was daring enough to sing Todi in front of no less than ‘the champion of Todi ’, Vidwan T.N Rajaratnam Pillai and won his praise. Her music won the appreciation of stalwarts like Vidwan Lagudi Jayaraman, Vidushi M.S. Subbulakshmi and Ustad Bade Ghulam Ali Khan. 

MLV’s repertoire was so vast that every concert of hers had newer and newer ragas and compositions to offer to the rasikas. In addition to the compositions of the Trinity, she often presented modern composers like Papanasam Sivan, Poochi Srinivasa Iyengar, GNB, N.S.Ramachandran, Ambujam Krishna and Periasami Thooran. Her exquisite rendering of Purandaradasa songs was a major attraction in her concerts. She was instrumental in popularizing many compositions of the Haridasas by tuning them and bringing them to mainstream concert platform. ‘Innu daya barade’, ‘Baro Krishnayya’, ‘Sharanu Benakane’, ‘Gajavadana paliso’, ‘Yamanelli kanenendu’, ‘Venkatachala nilayam’, ‘Yadava Raya’ in her silken voice were sublime expressions of melody. ‘Chandrachooda Shiva shankara’ tuned by her in Ragamalaika, with the last charana in khanda nadai and each line of it in the reverse order of the ragas previously used, speaks volumes of her exquisite musicianship. She would also sing Ugabhogas and shlokas, aesthetically blending the technicalities of the raga with the sahitya bhava. Tillanas, particularly Lalgudi’s, were another draw in her concerts. ‘Kalyana Gopalam’ in Sindhubhairavi, ‘Unnai enri’ in Bhavani, ‘Muruga Nin’ in Behag, ‘Mariyadagadayya’ in Bhairavam, ‘Marugelara’ in Jayanthasri were some of her other masterpieces.

MLV’s venture into film music was equally remarkable. ‘Ellam Inba Mayam' and ‘Chinnanchiru kiliye' (Manamagal-1951), Imaya malai chaaralile (Manithanum Mirugamum–1953), Taaye yashoda undan (Kuladaivam-1956), Anthi mayanguthadi and Vadiveru Tirisoolam (Parthiban Kanavu-1960), Paal Kadal Alaimele (Raja Desingu-1960) Aadatha Manamum Undo (Mannadhi Mannan–1960) were some of the classical super hits of MLV which gave her golden voice more reach and popularity. She would also sing for her daughter Srividya’s dance recitals.

MLV’s charm, grace and humility could never go unnoticed. Her open mindedness and infinite craving for knowledge made her fairly appreciate other artists and other forms of music. 

MLV was beyond doubt a complete musician. A successful artist who became popular during her guru’s lifetime and who reached the bracket of the female trinity with MS and DKP who very may years senior to her, she was the youngest female recipient of the coveted Sangeetha Kalanidhi. She is a delight to any listener and a guiding spirit to any student of Carnatic Music. One may use all the expressions in the vocabulary, and write pages and pages to describe her music. Yet, explanations can never replace experience. Blessed are those who have experienced the divine melody of this phenomenal musician! 


Friday, 8 May 2015

I was invited by Shaale.com to talk about Sri Krishna Leela Tarangini, as a part of their Sanskrit podcast series with journalist Smt. Shoba Narayan. Here is the video clipping.Thursday, 26 December 2013

An article written by me in 2007 for a souvenir

ಸಂಗೀತ ಮತ್ತು ಭಾರತೀಯ ಆಧ್ಯಾತ್ಮಿಕ ಪರಂಪರೆ 


ಜಗತ್ತಿನಲ್ಲಿ ಭಾರತದೇಶವೇ ಸಂಸ್ಕೃತಿಯ ಉಗಮಕ್ಕೆ ಮೂಲಸ್ಥಾನ. ವಿಶ್ವದಲ್ಲಿ ಮೊಟ್ಟಮೊದಲು ಸಂಸ್ಕೃತಿಯನ್ನು ವಿಸ್ತಾರಗೊಳಿಸಿದ ಶ್ರೇಯಸ್ಸು ಭಾರತಕ್ಕೇ ಸೇರಿದೆ ಎಂಬುದನ್ನು ಇತಿಹಾಸವು ಸಂಪೂರ್ಣವಾಗಿ ಧೃಢಪಡಿಸುತ್ತದೆ. ಇತರ ದೇಶಗಳಲ್ಲಿ ಅಜ್ಞಾನವು ತಾಂಡವವಾಡುತ್ತ, ಅಲ್ಲಿಯ ಜನರು ಅನಾಗರಿಕ ಜೀವನವನ್ನು ನೆಡೆಸುತ್ತಿದ್ದ ಕಾಲದಲ್ಲೇ ಭಾರತವು ಜ್ಞಾನದ ಬೆಳಕನ್ನು ಕಂಡಿತ್ತು. ತನ್ನ ಉತ್ತಮ ಸಂಸ್ಕೃತಿ ಹಾಗು ಸಂಸ್ಕಾರಗಳಿಂದ ಅನಂತರದ ಕಾಲಗಳಲ್ಲಿ ವಿಶ್ವಕ್ಕೇ ಮಾದರಿಯಾಯಿತು. ಭಾರತದಲ್ಲಿ ಅತ್ಯಂತ ಪ್ರಾಚೀನ ಕಾಲದಲ್ಲೇ ಜನ್ಮ ತಾಳಿದ ಅನೇಕ ವಿದ್ಯೆಗಳಲ್ಲಿ ಆಧ್ಯಾತ್ಮ ವಿದ್ಯೆಯೇ ಶ್ರೇಷ್ಠವಾದುದು. ಈ ಆಧ್ಯಾತ್ಮ ವಿದ್ಯೆಯು ಮನುಷ್ಯನಿಗೆ ಇಹದಲ್ಲಿ ಶಾಂತಿಯನ್ನು, ಪರದಲ್ಲಿ ಮುಕ್ತಿಯನ್ನು ಕೊಡುವ ವಿದ್ಯೆಯಾಗಿದೆ. ಆನಂದವೇ ಜೀವನದ ಮುಖ್ಯವಾದ ಗುರಿ. ಈ ಆನಂದವು ಆಧ್ಯಾತ್ಮ ವಿದ್ಯೆಯಿಂದಲೇ ಲಭ್ಯವಾಗುವಂಥದ್ದು. ಈ ಅಲೌಕಿಕ ಆನಂದವನ್ನು ತಾವೂ ಅನುಭವಿಸಿ ಸಮಸ್ತ ಮಾನವ ಜನಾಂಗಕ್ಕೂ ಹಂಚಲು ಅನೇಕ ಆಧ್ಯಾತ್ಮ ಸಾಧಕರು, ಯೋಗಿಗಳು, ಋಷಿಮುನಿಗಳು, ಮತಾಚಾರ್ಯರು, ತತ್ತ್ವಜ್ಞಾನಿಗಳು ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ಮಾರ್ಗಗಳಿಂದ ಆ ಪಾರಮಾರ್ಥಿಕವಾದ ಸತ್ಯವನ್ನು ಕಂಡುಕೊಂಡರು, ಇತರರಿಗೂ ಬೋಧಿಸಿದರು, ಉಪದೇಶಿಸಿದರು. ಚಿಂತನಶೀಲರಾದ ಈ ತತ್ತ್ವಶಾಸ್ತ್ರಜ್ಞರು ಭಾರತದ ಸಂಸ್ಕೃತಿ ಹಾಗು ಧರ್ಮಗಳಿಗೆ ವೈಚಾರಿಕ ಹಾಗು ವೈಜ್ಞಾನಿಕ ತಳಹದಿ ಕಲ್ಪಿಸಿದರು.

ಈ ಎಲ್ಲ ಮಹಾನುಭಾವರ ಆಧ್ಯಾತ್ಮ ಸಾಧನೆಯ ಮುಖ್ಯ ಗುರಿಯೇ ಭಗವಂತನ ಸಾಕ್ಷಾತ್ಕಾರ. ಅಂತೆಯೆ, ಎಲ್ಲ ಆಧ್ಯಾತ್ಮ ಸಾಧಕರ ಸಾಮಾನ್ಯವಾದ ಗುಣ  - ತತ್ತ್ವಶಾಸ್ತ್ರೀಯವಾದ ಪ್ರಖರ ವಿಚಾರವಂತಿಕೆಯ ಜೊತೆಗೆ ಭಾವನಿರ್ಭರತೆ. ಅವರೆಲ್ಲರ ತತ್ತ್ವ ಭಕ್ತಿಯ ಹೆಗ್ಗಳಿಕೆಯನ್ನು ಹೇಳುತ್ತ, ಬುದ್ಧಿಯ ಸಂಪತ್ತು ಹಾಗು ಹೃದಯದ ಸಂಪತ್ತು ಬೇರೆಬೇರೆಯಲ್ಲ ಎಂದು ಸಾರುತ್ತದೆ. ಭಕ್ತಿಯ ಅಭಿವ್ಯಕ್ತಿಗೆ, ಹೃದಯದ ಭಾಷೆಯ ಪ್ರಕಟಣೆಗೆ ಸಂಗೀತಕ್ಕಿಂತ  ಉತ್ತಮವಾದ ಸಾಧನ ಮತ್ತೊಂದಿಲ್ಲ. ಸಂಗೀತವು ಒಂದು ದೈವಿಕವಾದ ಕಲೆ; ವಿಶೇಷವಾಗಿ ಭಾರತೀಯ ಸಂಗೀತವು ಆಧ್ಯಾತ್ಮಿಕತೆ ಹಾಗು ಭಕ್ತಿಪ್ರಾಧಾನ್ಯತೆಯ ಪ್ರತೀಕ. ಸಂಗೀತ ಹಾಗು ಆಧ್ಯಾತ್ಮಿಕತೆ ನಮ್ಮ ದೇಶದಲ್ಲಿ ಜೊತೆಜೊತೆಯಾಗಿ ಇದ್ದಂಥವು. ಸಂಗೀತಗಾರರೆಲ್ಲರು ಮಹಾನ್ ಭಗವದ್ಭಕ್ತರು, ಆಧ್ಯಾತ್ಮ ಚಿಂತಕರು ಆಗಿದ್ದವರು. ಅಂತೆಯೆ, ತತ್ತ್ವಜ್ಞಾನಿಗಳು, ಯೋಗಿಗಳು ಸಂಗೀತದ ಶ್ರೇಷ್ಠ ಗುಣಕ್ಕೆ ಮಾರುಹೋದವರು.

"ವೇದಾನಾಂ ಸಾಮವೇದೋsಸ್ಮಿ " ಎಂದು ಶ್ರೀ ಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ ಹೇಳಿರುತ್ತಾನೆ. ಶ್ರೀವಿಷ್ಣುಸಹಸ್ರನಾಮದಲ್ಲಿ ಭಗವಂತನನ್ನು 'ಸಾಮಗಾಯನಃ' (ಅಂದರೆ ಸಾಮಗಳಿಂದ ಹಾಡಲ್ಪಡುವವನು) ಎಂದು ಕರೆಯಲಾಗಿದೆ. ಸಾಮಗಾನಲೋಲನಾದ ಆ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಂಡ ಎಲ್ಲ ಮಹಾನುಭಾವರು ತಮ್ಮ ತಮ್ಮ ತತ್ತ್ವಗಳನ್ನು ಪ್ರತಿಪಾದಿಸಲು, ತಮ್ಮ ಭಕ್ತಿಯನ್ನು ವ್ಯಕ್ತಪಡಿಸಲು, ಭಗವದನುಭವದಲ್ಲಿ ಮೈಮರೆಯಲು, ತಾವು ಕಂಡ ಪರಮಾತ್ಮನನ್ನು ವರ್ಣಿಸಲು ಸಂಗೀತವನ್ನೂ ಸಾಹಿತ್ಯವನ್ನೂ ಬಳಸಿಕೊಂಡರು. ಹಾಗಾಗಿ, ನಮ್ಮ ದೇಶದ ಯಾವುದೇ ಆಧ್ಯಾತ್ಮಿಕ ಪರಂಪರೆಯನ್ನು ತೆಗೆದುಕೊಂಡರೂ, ಆ ಪರಂಪರೆಯಲ್ಲಿ ಬಂದಂತಹ ಮಹಾನುಭಾವರ ಭಕ್ತಿಭರಿತ ಗಾನಯೋಗ್ಯ ರಚನೆಗಳು ಸಿಗುತ್ತವೆ.

ನಮ್ಮ ದೇಶದಲ್ಲಿ ಜೈನ ಹಾಗು ಬೌದ್ಧ ಧರ್ಮಗಳು ಪ್ರಚಾರದಲ್ಲಿದ್ದು, ವೈದಿಕ ಪರಂಪರೆಯು ನಾಶವಾಗುತ್ತಿದ್ದ ಕಾಲ ಸುಮಾರು ಕ್ರಿ.ಶ. ೬-೭ನೆಯ ಶತಮಾನ. ಆ ಸಂದರ್ಭದಲ್ಲಿ ಜನ್ಮ ತಾಳಿದ ಶ್ರೀಮದ್ ಆದಿಶಂಕರಾಚಾರ್ಯರು ಸಮಸ್ತ ವೈದಿಕ ವಾಂಗ್ಮಯವನ್ನು ಪುನರುತ್ಥಾನಗೊಳಿಸಿ ತಮ್ಮ ಅದ್ವೈತ ತತ್ತ್ವವನ್ನು ವಿಶ್ವಕ್ಕೆ ನೀಡಿದರು. "ಬ್ರಹ್ಮ ಸತ್ಯಂ ಜಗನ್ಮಿಥ್ಯಂ ಜೀವೋ ಬ್ರಹ್ಮೈವ ನಾಪರಃ" ಎಂದು ಸಾರಿದ ಮಹಾಮಹಿಮರು ಆದಿಶಂಕರರು. ತಮ್ಮ ತತ್ತ್ವ ಪ್ರತಿಪಾದನೆಗಾಗಿ ಪ್ರಸ್ಥಾನತ್ರಯಗಳಿಗೆ (ಭಗವದ್ಗೀತೆ, ಉಪನಿಷತ್ತುಗಳು ಮತ್ತು ಬ್ರಹ್ಮಸೂತ್ರಗಳು) ಭಾಷ್ಯಗಳನ್ನೂ, ಹಲವು ಪ್ರಕರಣಗ್ರಂಥಗಳನ್ನೂ ರಚಿಸಿದರು. ಇದಲ್ಲದೆ, ಅನೇಕ ಸ್ತ್ರೋತ್ರಗಳನ್ನು ರಚಿಸಿ ಭಗವಂತನಿಗರ್ಪಿಸಿದರು. "ಈ ದುಃಖಮಾಯವಾದ ಸಂಸಾರವನ್ನು ತ್ಯಜಿಸಿ ಭಗವಂತನ ಚಿಂತನೆಯನ್ನು ಮಾಡು ಎಂದು ಸಾರುವ ಒಂದು ಸುಂದರ ಗೀತೆ 'ಭಜಗೋವಿಂದಮ್'. ಅಂತೆಯೆ, 'ಶಿವಾನಂದಲಹರೀ', 'ಸೌಂದರ್ಯಲಹರೀ', 'ಕನಕಧಾರಾಸ್ತೋತ್ರಮ್', 'ಮನೀಷಪಂಚರತ್ನಮ್', ಮುಂತಾದ ಪದ್ಯರೂಪವಾದ ಗೇಯ ಸ್ತೋತ್ರಗಳನ್ನು ರಚಿಸಿದರು. ಇವರ ಶಿಷ್ಯರಾದ ತೋಟಕಾಚಾರ್ಯರು 'ತೋಟಕಾಷ್ಟಕಮ್' ಎಂಬ ಸಂಸ್ಕೃತ ಪದ್ಯವನ್ನು (ತಮ್ಮ ಗುರು ಶಂಕರರನ್ನು ಕುರಿತು) ರಚಿಸಿದರು. 

ಸುಮಾರು ೭-೯ನೆಯ ಶತಮಾನದಲ್ಲಿ ತಮಿಳುನಾಡಿನಲ್ಲಿ 'ತೇವಾರಮ್'ಗಳು ರಚನೆಗೊಂಡವು. ತಿರುಜ್ಞಾನಸಂಬಂಧರ್, ತಿರುನವುಕ್ಕರಸರ್ ಮತ್ತು ಸುಂದರಮೂರ್ತಿ ಎಂಬ ಮೂರು ಶೈವ ನಾಯನ್ಮಾರ ಸಂತರುಗಳಿಂದ ತಮಿಳು ಭಾಷೆಯಲ್ಲಿ ರಚನೆಗೊಂಡ ಸಾವಿರಾರು ಪದ್ಯಗಳೇ ಈ ತೇವಾರಂಗಳು. ಪ್ರತಿಯೊಂದು ಪದ್ಯವನ್ನೂ ಒಂದು ನಿರ್ದಿಷ್ಟವಾದ ರಾಗದಲ್ಲಿ ರಚಿಸಲಾಗಿದ್ದು, ಅವುಗಳನ್ನು 'ಪನ್'ಗಳೆಂದು ಕರೆಯಲಾಗುತ್ತಿತ್ತು. ಅತ್ಯಂತ ಪವಿತ್ರವಾದ ಈ ತೇವಾರಂಗಳನ್ನು ಇಂದಿಗೂ ಕೆಲವು ದೇವಸ್ತಾನಗಳಲ್ಲಿ ಹಾಡಲಾಗುತ್ತದೆ. ನಂತರ, ಸುಮಾರು ೧೫ನೆಯ ಶತಮಾನದಲ್ಲಿ ಜನ್ಮತಾಳಿದ ಅರುಣಗಿರಿನಾಥರ್ ರವರು ಮುರುಗನ ಕುರಿತು ರಚಿಸಿದ ತಮಿಳು ಪದ್ಯಗಳಾದ 'ತಿರುಪ್ಪುಗಳ್' (ಸುಮಾರು ೧೪೦೦ ಈಗ ಉಪಲಬ್ಧವಿದೆ) ಅದ್ವೈತ ತತ್ತ್ವವನ್ನೇ ಆಧರಿಸಿವೆ. ಇವು ವಿವಿಧ ರೀತಿಯ ಜಟಿಲವಾದ ಸುಂದರ ಲಯ ವಿನ್ಯಾಸಗಳನ್ನು ಹೊಂದಿ ಇಂದಿಗೂ ಅದ್ವಿತೀಯವಾಗಿವೆ. ಅದ್ವೈತ ಪರಂಪರೆಯಲ್ಲಿಯೇ ಬಂದಂತಹ ಅಪ್ಪಯ್ಯ ದೀಕ್ಷಿತರು, ಮಧುಸೂದನ ಸರಸ್ವತಿ ಮುಂತಾದವರು ತತ್ತ್ವಪ್ರಚಾರ ಕಾರ್ಯಗಳೊಂದಿಗೆ ಅನೇಕ ಸ್ತುತಿಗಳನ್ನು, ಪದ್ಯಗಳನ್ನು ರಚಿಸಿದರು. ೧೮ನೆಯ ಶತಮಾನದಲ್ಲಿ ತಮಿಳುನಾಡಿನ ಕುಂಬಕೋಣಂನಲ್ಲಿ ವಾಸವಾಗಿದ್ದ ಸದಾಶಿವ ಬ್ರಹ್ಮೇಂದ್ರರು ಒಬ್ಬ ಮಹಾನ್ ಕರ್ನಾಟಕ ಸಂಗೀತ ವಾಗ್ಗೇಯಕಾರರು ಹಾಗು ಅದ್ವೈತ ತತ್ತ್ವಜ್ಞಾನಿಗಳು. 'ಅದ್ವೈತರಸಮಂಜರಿ', 'ಬ್ರಹ್ಮತತ್ತ್ವಪ್ರಕಾಶಿಕಾ' ಮುಂತಾದ ಗ್ರಂಥಗಳನ್ನಲ್ಲದೆ, 'ಮಾನಸ ಸಂಚಾರ ರೇ', 'ಪಿಬರೇ ರಾಮರಸಂ', 'ಭಜರೇ ಯದುನಾಥಂ', ಮುಂತಾದ ಭಕ್ತಿರಸಭರಿತವಾದ ಕೀರ್ತನೆಗಳನ್ನು ರಚಿಸಿದರು. ತಮಿಳು ಕವಿಗಳಾದ ಗೋಪಾಲಕೃಷ್ಣ ಭಾರತಿಯವರು 'ನಂದನಾರ್ ಚರಿತ್ರಮ್', 'ಕಥಾಕಾಲಕ್ಷೇಪಮ್'ಗಳನ್ನಲ್ಲದೆ ಅದ್ವೈತ ಸಿದ್ಧಾಂತವನ್ನು ಆಧರಿಸಿ ಸಭಾಪತಿಕ್ಕಿ, ವರುವಾರೋ, ವರುಗಲಾಮೋ ಮೊದಲಾದ ಹಲವಾರು ಕೃತಿಗಳನ್ನು ರಚಿಸಿದರು. ಇನ್ನು ನಮ್ಮ ಕರ್ನಾಟಕ ಸಂಗೀತ ತ್ರಿಮೂರ್ತಿಗಳಾದ ತ್ಯಾಗರಾಜರು, ಮುತ್ತುಸ್ವಾಮಿದೀಕ್ಷಿತರು ಹಾಗು ಶ್ಯಾಮಾಶಾಸ್ತ್ರಿಗಳ ರಚನೆಗಳ ಮುಖ್ಯ ಉದ್ದೇಶವು ತತ್ತ್ವಪ್ರತಿಪಾದನೆ ಅಲ್ಲದಿದ್ದರೂ, ಅವು ಅದ್ವೈತ ಸಿದ್ಧಾಂತವನ್ನೇ ಅವಲಂಬಿಸಿವೆ. ಈ ಮೂವರು ವಾಗ್ಗೇಯಕಾರರು ತಮ್ಮ ಅಪಾರ ಜ್ಞಾನ, ಆಳವಾದ ಆಧ್ಯಾತ್ಮಿಕತೆ, ಘನವಾದ ಸಾಂಪ್ರದಾಯಿಕ ಸಂಗೀತಶಾಸ್ತ್ರ ಪಾಂಡಿತ್ಯ ಹಾಗು ಅದ್ಭುತವಾದ ಸೃಜನಶೀಲತೆಗಳಿಂದ ಸಾವಿರಾರು ಕೃತಿಗಳನ್ನು ರಚಿಸಿ ಕರ್ನಾಟಕ ಸಂಗೀತವನ್ನು ಬಹಳಷ್ಟು ಶ್ರೀಮಂತಗೊಳಿಸಿದರು.

ವಿಶಿಷ್ಟಾದ್ವೈತವನ್ನು ಶ್ರೀ ರಾಮಾನುಜಾಚಾರ್ಯರೇ ಸೃಷ್ಟಿಸಿದ್ದಲ್ಲ. ಅವರಿಗಿಂತ ಹಿಂದೆಯೆ ಅನೇಕ ಆಳ್ವಾರರು ಹಾಗು ಆಚಾರ್ಯರು ಇದ್ದರು. ಈ ಸಿದ್ಧಾಂತದಲ್ಲಿ ಭೇದ, ಅಭೇದ ಹಾಗು ಭೇದಾಭೇದ ಎಂಬ ತ್ರಿವಿಧ ತತ್ತ್ವಗಳನ್ನು ಪ್ರತಿಪಾದಿಸಲಾಗಿದೆ. ಜೀವರ ಮೋಕ್ಷಸಾಧನವು ಕೇವಲ ಭಕ್ತಿ ಹಾಗು ಪ್ರಪತ್ತಿ ಎನ್ನಲಾಗಿದೆ. ಸುಮಾರು ೭ರಿಂದ ೧೦ನೆಯ ಶತಮಾನದ ಕಾಲಾವಧಿಯಲ್ಲಿ ಇದ್ದ ೧೨ ಮಂದಿ ಆಳ್ವಾರರು ತಮಿಳು ಭಾಷೆಯಲ್ಲಿ ಅನೇಕ ಪದ್ಯಗಳನ್ನು ರಚಿಸಿದರು. ಅವುಗಳನ್ನು 'ನಾಲಾಯಿರ ದಿವ್ಯ ಪ್ರಬಂಧಮ್' (ನಾಲ್ಕು ಸಾವಿರ ಪ್ರಬಂಧಗಳು) ಎಂದು ಕರೆಯುವ ವಾಡಿಕೆಯಿದೆ. ತಮಿಳು ಸಾಹಿತ್ಯಕ್ಕೆ ಒಂದು ವಿಶಿಷ್ಟ ಕೊಡುಗೆಯಾಗಿ ತಮ್ಮ ಅನುಭವಗಳನ್ನು ೨೪ ದಿವ್ಯ ಪ್ರಬಂಧಗಳಲ್ಲಿ ೪೦೦೦ ಪಾಶುರ(ಪದ್ಯ)ಗಳಲ್ಲಿ ನೀಡಿದ ಆಳ್ವಾರರು ಅನುಭವಿಗಳು. ಇವುಗಳಲ್ಲಿ ಅವರು ಭಗವಂತನ ವಿವಿಧ ಅವತಾರಗಳನ್ನು ತಮ್ಮ ಅನುಭವಕ್ಕೆ ತಕ್ಕಂತೆ ವರ್ಣಿಸುತ್ತಾರೆ. ಭಗವಂತನ ಅದ್ಭುತ ಲೀಲೆಗಳನ್ನೇ ನೆನೆಯುತ್ತ ಅದರಲ್ಲೆ ತನ್ಮಯರಾಗಿಬಿಡುತ್ತಾರೆ. ಈ ದಿವ್ಯಪ್ರಬಂಧಗಳು ಆಳ್ವಾರರ ಭಗವದ್ಪ್ರೇಮದ ಪರಿವಾಹಗಳೇ ಆದರೂ, ತತ್ತ್ವ-ಹಿತ-ಪುರುಷಾರ್ಥ ಸ್ವರೂಪವನ್ನು ಅತ್ಯಂತ ಖಚಿತವಾಗಿ ತೊರಿಸಿಕೊಡುತ್ತವೆ. ಇವು ವೇದಗಳ ಸಾರವಾಗಿರುವ ಕಾರಣ ಇವುಗಳನ್ನು 'ದ್ರಾವಿಡವೇದ' ಎಂದು ಕರೆಯಲಾಗುತ್ತದೆ.  ಈ ದಿವ್ಯ ಪ್ರಬಂಧಗಳಲ್ಲಿ ಕುಲಶೇಖರ ಆಳ್ವಾರರ 'ಪೆರುಮಾಳ್ ತಿರುಮೊಳಿ', ಗೋದಾದೇವಿ(ಆಂಡಾಳ್)ಯ 'ತಿರುಪ್ಪಾವೈ', ನಮ್ಮಳ್ವಾರರ 'ತಿರುವಾಯ್ ಮೊಳಿ' ಮುಂತಾದವು ಪ್ರಸಿದ್ಧವಾಗಿವೆ. ಈ ತಮಿಳು ಆಳ್ವಾರರ ವಿಚಾರಗಳಿಂದ ಪ್ರಭಾವಿತರಾದ ಶ್ರೀರಾಮಾನುಜಾಚಾರ್ಯರು ವಿಶಿಷ್ಟಾದ್ವೈತಕ್ಕೆ ಒಂದು ಬಗೆಯ ಹೊಸದಾದ ಚೌಕಟ್ಟನ್ನು ಸೃಷ್ಟಿಸಿ, ಅದರ ಸಿದ್ಧಾಂತಗಳನ್ನು ಹಿಂದಿನ ಆಚಾರ್ಯರಿಗಿಂತ ಹೆಚ್ಚು ಜನಪ್ರಿಯಗೊಳಿಸಿದರು. ಶ್ರೀರಂಗ, ಮೇಲುಕೋಟೆ, ತಿರುಪತಿ ಮೊದಲಾದ ಪ್ರದೇಶಗಳಲ್ಲಿ ವಾಸಿಸಿ ಅನುಯಾಯಿಗಳನ್ನು ಬೆಳೆಸಿದರು. 'ಶ್ರೀಭಾಷ್ಯ', 'ವೇದಾಂತ ಸಾರ', 'ವೇದಾಂತ ಸಂಗ್ರಹ', ಮುಂತಾದವು ಇವರ ಕೃತಿಗಳು. ಆಳ್ವಾರರ ತಮಿಳು ಪ್ರಬಂಧಗಳನ್ನು ದೇವಸ್ಥಾನಗಳಲ್ಲಿ ಹಾಗು ವಿಶೇಷ ಸಂದರ್ಭಗಳಲ್ಲಿ ಹಾಡುವುದನ್ನು ಆಚರಣೆಗೆ ತಂದರು. ಅಲ್ಲದೆ, ಈಗಿನ ಕರ್ನಾಟಕ ಸಂಗೀತ ವೇದಿಕೆಯಲ್ಲಿಯೂ ಇವುಗಳನ್ನು ಹಾಡಲಾಗುತ್ತದೆ. ಇದೇ ಪರಂಪರೆಯಲ್ಲಿ ಬಂದ ತಿರುಪತಿಯ ತಾಳ್ಳಪಾಕ ಅನ್ನಮಾಚಾರ್ಯರು (೧೫ನೆ ಶತಮಾನ) ಸಂಕೀರ್ತನೆಗಳನ್ನು ರಚಿಸಿದವರಲ್ಲಿ ಮೊದಲಿಗರು. ತಮ್ಮ ಪ್ರತಿಯೊಂದು ರಚನೆಯನ್ನು ಶ್ರೀವೇಂಕಟೇಶ್ವರನಿಗೆ ಮಾಡುವ ಪುಷ್ಪ ಸಮರ್ಪಣೆಯಂದು ತಿಳಿದು, ಅವನನ್ನು ವರ್ಣಿಸಿ, ಭಜಿಸಿ, ಸ್ತುತಿಸಿ, ಪ್ರೀತಿಸಿ, ಅವನೊಂದಿಗೆ ವಾದಿಸಿ, ಜಗಳವಾಡಿ, ಕೊನೆಗೆ ಅವನಿಗೇ ಶರಣಾಗಿ ಭಕ್ತಿಯ ಪರಾಕಾಷ್ಟತೆಯನ್ನು ಎತ್ತಿಹಿಡಿದರು. ಇವರಿಗೆ 'ತೆಲುಗು ಪದಕವಿತಾ ಪಿತಾಮಹ' ಎಂಬ ಗೌರವ ಸಂದಿದೆ. ಇವರು ರಚಿಸಿದ ಸುಮಾರು ೩೨,೦೦೦ ಆಧ್ಯಾತ್ಮ ಹಾಗು ಶೃಂಗಾರ ಸಂಕೀರ್ತನೆಗಳು (ಸಂಸ್ಕೃತ ಹಾಗು ತೆಲುಗು ಭಾಷೆಗಳಲ್ಲಿ) ಕರ್ನಾಟಕ ಸಂಗೀತದ ಆಧುನಿಕ ಕೃತಿರೂಪಕ್ಕೆ ಬುನಾದಿ ಹಾಕಿತು.

೧೨ನೆ ಶತಮಾನದಲ್ಲಿ ಶ್ರೀ ಬಸವಣ್ಣನವರು ಕರ್ನಾಟಕದ ಸಾಮಾಜಿಕ ಮತ್ತು ಧಾರ್ಮಿಕ ಆಂದೋಲನದಲ್ಲಿ ಅತ್ಯಂತ ಪ್ರಮುಖ ಹಾಗು ಕ್ರಾಂತಿಕಾರಿ ಪಾತ್ರ ವಹಿಸಿದರು. ಬಸವಕಲ್ಯಾಣದಲ್ಲಿ 'ಅನುಭವ ಮಂಟಪ' ಎಂಬ ಆಧ್ಯಾತ್ಮ ಸಂಸತ್ತನ್ನು ಸ್ಥಾಪಿಸಿದರು. ಅದರಿಂದ ಪ್ರಾರಂಭಗೊಂಡ ವೀರಶೈವ ಸಂಪ್ರದಾಯದ ಅಭಿವ್ಯಕ್ತಿಯಾದುದೇ ವಚನ ಸಾಹಿತ್ಯದಿಂದ. ಬಸವಣ್ಣನವರು ಜನಸಾಮಾನ್ಯರಿಗೆ ತತ್ತ್ವವಿಚಾರಗಳು ಸುಲಭವಾಗಿ ಅರ್ಥವಾಗಿ ಅವರೂ ಆಧ್ಯಾತ್ಮ ಏಳಿಗೆಯನ್ನು ಸಾಧಿಸಲು ಸರಳ ಕನ್ನಡದಲ್ಲಿ ವಚನಗಳನ್ನು ರಚಿಸಿದರು. 'ದಯವಿಲ್ಲದ ಧರ್ಮವಾವುದಯ್ಯ', 'ದೇವನೊಬ್ಬ ನಾಮ ಹಲವು', 'ಸಕಲ ಜೀವಗಳಿಗೆ ಲೇಸನು ಬಯಸುವುದೇ ನಿಜವಾದ ಧರ್ಮ', ಎಂದು ಸಾರಿ, ಮಾನವೀಯ ಮೌಲ್ಯಗಳಿಗೆ ಒತ್ತುಕೊಟ್ಟರು. ಅಲ್ಲಮ್ಮಪ್ರಭು, ಅಕ್ಕಮಹಾದೇವಿ, ನಾಗಲಾಂಬಿಕೆ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ, ಅಂತ್ಯಜ ಹರಳಯ್ಯ ಮೋಡಲಾದ ೨೦೦ ವಚನಕಾರರು ಈ ಸಂಪ್ರದಾಯವನ್ನು ಬೆಳೆಸಿದರು.

ದ್ವೈತ ಸಿದ್ಧಾಂತದ ಪ್ರವರ್ತಕರಾದ ಶ್ರೀಮನ್ಮಧ್ವಾಚಾರ್ಯರು ೧೩ನೆ ಶತಮಾನದಲ್ಲಿ ಜನ್ಮ ತಾಳಿದ ಒಬ್ಬ ಮಹಾನ್ ವಿಭೂತಿ ಪುರುಷರು. 'ಸ್ವತಂತ್ರಂ ಪರತಂತ್ರಂ ಚ ದ್ವಿವಿಧಂ ತತ್ತ್ವಮೀಷ್ಯತೇ । ಸ್ವತಂತ್ರೋ ಭಗವಾನ್ ವಿಷ್ಣುಃ ನಿರ್ದೋಷೋSಶೇಷ ಸದ್ಗುಣಃ ।।' ಎಂಬುದು ಇವರ ತತ್ತ್ವ. ವಿಷ್ಣುಸರ್ವೋತ್ತಮತ್ವ (ಹರಿಃ ಪರತರಃ), ಜಗತ್ತಿನ ಸತ್ಯವಾದ (ಸತ್ಯಂ ಜಗತ್), ಭೇದ ತತ್ತ್ವ (ಜೀವ-ಈಶ್ವರ ಭೇದ, ಜಡ-ಈಶ್ವರ ಭೇದ, ಜಡ-ಜೀವ ಭೇದ, ಪರಸ್ಪರ ಜೀವ ಭೇದ ಹಾಗು ಪರಸ್ಪರ ಜಡ ಭೇದ) - ಇವು ಇವರ ಸಿದ್ಧಾಂತದ ಮುಖ್ಯಾಂಶಗಳು. ಇವರ 'ಋಗ್ವೇದಭಾಷ್ಯ', 'ಬ್ರಹ್ಮಸೂತ್ರಭಾಷ್ಯ', 'ಗೀತಾಭಾಷ್ಯ', 'ಮಹಾಭಾರತತಾತ್ಪರ್ಯನಿರ್ಣಯ', 'ವಿಷ್ಣುತತ್ತ್ವನಿರ್ಣಯ', 'ಯಮಕಭಾರತ', ಮುಂತಾದ ಸುಮಾರು ೪೦ ಶಾಸ್ತ್ರಗ್ರಂಥಗಳನ್ನು 'ಸರ್ವಮೂಲಗ್ರಂಥಗಳು' ಎಂದು ಕರೆಯಲಾಗುತ್ತದೆ. ತತ್ತ್ವಪ್ರತಿಪಾದನೆಗೆ, ವೇದೋಪನಿಷತ್ತುಗಳ ನಿರ್ವಚನ ಹಾಗು ವ್ಯಾಖ್ಯಾನಕ್ಕೆ ಈ ಗ್ರಂಥಗಳನ್ನು ರಚಿಸಿದರೆ, ಭಗವಂತನಲ್ಲಿ ತಮಗಿದ್ದ ನಿರ್ಮಲವಾದ ಭಕ್ತಿಭಾವದ ಆವಿರ್ಭಾವಕ್ಕೆ ದ್ವಾದಶ ಸ್ತೋತ್ರಗಳನ್ನು ರಚಿಸಿದರು. ತಮ್ಮ ಶಿಷ್ಯರೊಂಗಿದೆ ಸಂಚರಿಸುತ್ತ ಭಗವಂತನ ಕುರಿತು ಈ ಸಂಸ್ಕೃತ ಹಾಡುಗಬ್ಬಗಳನ್ನು ರಚಿಸಿ ಹಾಡಿದರು, ಶಿಷ್ಯರಿಂದಲೂ ಹಾಡಿಸಿದರು. ಜೊತೆಗೆ ತಾನೂ ತಾಳ ತಟ್ಟಿ ಕುಣಿದು ನಲಿದಾಡಿದರು. ಇದು ಭಕ್ತಿಯ ಭಾಷೆ; ಇದು ಸಂಗೀತದ ಭಾಷೆ. ಈ ದ್ವಾದಶ ಸ್ತೋತ್ರಗಳು ಸಂಸ್ಕೃತ ಭಕ್ತಿ ಕಾವ್ಯಗಳಲ್ಲೇ ಅತ್ಯಂತ ಅಪೂರ್ವ ಕೃತಿ. ವಾಗ್ಗೇಯಕಾರರಾದ ಆಚಾರ್ಯರು ಭಕ್ತಿಸಾಹಿತ್ಯಕ್ಕೆ ನೀಡಿದ ಕಾಣಿಕೆ ಇದು; ಕರ್ನಾಟಕ ಸಂಗೀತ ಪರಂಪರೆಗೆ ನೀಡಿದ ಕಾಣಿಕೆ ಇದು. ಈ ಬೀಜ ಮೊಳಕೆ ಬಿಟ್ಟಾಗಲೆ ದಾಸಸಾಹಿತ್ಯದ ಉದಯವಾಗಿತು. ಇವರ ಶಿಷ್ಯರಾದ ತ್ರಿವಿಕ್ರಮ ಪಂಡಿತಾಚಾರ್ಯರು, ನಾರಾಯಣ ಪಂಡಿತಾಚಾರ್ಯರು, ಕಮಲಾಕ್ಷ ತೀರ್ಥರು ಮುಂತಾದವರು ಸಂಸ್ಕೃತದಲ್ಲಿ ಅನೇಕ ಸುಂದರ ಗೇಯ ಪದ್ಯಗಳನ್ನು ರಚಿಸಿದರು. 

ಮಧ್ವಾಚಾರ್ಯರು ಭಕ್ತಿ ಪಂಥಕ್ಕೆ, ದಾಸ ಸಾಹಿತ್ಯಕ್ಕೆ ನಾಂದಿ ಹಾಡಿದ ನಂತರ, ಅವರ ನೇರ ಶಿಷ್ಯರಾದ ನರಹರಿ ತೀರ್ಥರು (೧೩ನೆ ಶತಮಾನ) ಭಾಗವತ ಧರ್ಮದ ಕೀರ್ತನ ಪದ್ಧತಿಯಿಂದ ಪ್ರೇರಿತರಾಗಿ ಕನ್ನಡದಲ್ಲಿ ಕೀರ್ತನೆ ರಚಿಸಿದ ಮೊದಲಿಗರು. ಭಕ್ತಿಯಿಂದಲೇ ಮುಕ್ತಿ ಎನ್ನುತ್ತ ಭಗವದ್ವೃತ್ತಿಗೆ ಸಂಗೀತವನ್ನು, ಕಾವ್ಯವನ್ನು ಎತ್ತಿ ಹಿಡಿದರು. ನರಹರಿ ತೀರ್ಥರಿಂದ ಪ್ರಾರಂಭಗೊಂಡ ಈ ಪರಂಪರೆಯನ್ನು ಬೆಳಸಿ ದಾಸಸಾಹಿತ್ಯಕ್ಕೆ ಒಂದು ತಳಹದಿ ಹಾಕಿಕೊಟ್ಟವರು ದಾಸಶ್ರೇಷ್ಠ, ಸಾಹಿತ್ಯಚಿಂತಾಮಣಿಗಳಾದ ಶ್ರೀಪಾದರಾಜರು. 'ಇಕೋ ನೋಡೆ ರಂಗನಾಥನ ಪುಟ್ಟ ಪಾದವ', 'ಪೋಪು ಹೋಗೋಣ ಬಾರೋ ರಂಗ', 'ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ', ಮುಂತಾದ ಅವರ ರಚನೆಗಳು ಭಗವಂತನಲ್ಲಿ ಅವರಿಗಿದ್ದ ಅಚಲ ಭಕ್ತಿ, ವಾತ್ಸಲ್ಯ ಭಾವ, ಆಳವಾದ ತತ್ತ್ವಜ್ಞಾನ ಹಾಗು ಅನುಭವಕ್ಕೆ ಅಪೂರ್ವ ನಿದರ್ಶನ. ಪೂಜೆ ಉತ್ಸವಗಳ ವೈಭವವಿಜೃಂಭಣೆಗಳಲ್ಲಿ ಕನ್ನಡ ಕೀರ್ತನೆಗಳನ್ನು ಹಾಡಿ, ನರ್ತನ ಮಾಡುವ ಭಗವತೋತ್ತಮರ ತಂಡವೊಂದನ್ನೇ ಸಂಘಟಿಸಿ ಹರಿದಾಸ ಸಂಸ್ಕೃತಿಯ ನಿರ್ಮಾಣ ಮಾಡಿದರು. ಇವರ ಶಿಷ್ಯರಾದ ವ್ಯಾಸತೀರ್ಥರು ದಾಸಪರಂಪರೆಯ ಸುಸ್ಥಿತಿಗೆ ಕಾರಣರಾದರು. ಕೀರ್ತನೆಗಳನ್ನು ರಚಿಸಿದ್ದು ಮಾತ್ರವಲ್ಲದೆ, ಹರಿಭಾಕ್ತಿಯ ಪ್ರಚಾರಕ್ಕಾಗಿ ವ್ಯಾಸಕೂಟ-ದಾಸಕೂಟಗಳನ್ನು ಬೆಳಸಿ ದಾಸಸಾಹಿತ್ಯದ ವಿಕಾಸಕ್ಕೆ ನೆರವಾದ ಮಹನೀಯರು ವ್ಯಾಸತೀರ್ಥರು. ಉಡುಪಿಯ ಸೋದೆ ಮಠದ ಯತಿಗಳಾದ ಶ್ರೀ ವಾದಿರಾಜರು ಒಬ್ಬ ಸಂತ, ಕವಿ, ಪಂಡಿತ, ದಾರ್ಶನಿಕ, ತತ್ತ್ವಜ್ಞಾನಿ, ಭಾಗವದನುಭವಿ, ಸಮಾಜ ಸುಧಾರಕ, ಔದಾರ್ಯಮೂರ್ತಿ, ಪವಾಡಪುರುಷರಾಗಿ ಮೆರೆದವರು. 'ತೀರ್ಥಪ್ರಬಂಧ', 'ರುಗ್ಮಿಣೀಶವಿಜಯ', 'ಯುಕ್ತಿಮಲ್ಲಿಕಾ' ಮುಂತಾದವು ಇವರ ಸಂಸ್ಕೃತ ಗ್ರಂಥಗಳಾದರೆ, 'ಲಕ್ಷ್ಮೀಶೋಭಾನೆ', 'ಹರಿಸರ್ವೋತ್ತಮಸಾರ' ಇವರ ಕನ್ನಡ ಕೃತಿಗಳು. ಅಲ್ಲದೆ, ತಮ್ಮ ಉಪಾಸ್ಯಮೂರ್ತಿಯಾದ 'ಹಯವದನ' ಎಂಬ ಅಂಕಿತದಿಂದ ಅನೇಕ ಕನ್ನಡ ಹಾಗು ತುಳು ಹಾಡುಗಳನ್ನು ರಚಿಸಿ ಭಕ್ತಿಸಾಹಿತ್ಯವನ್ನು ಬೆಳೆಸಿದರು. 

ಕರ್ನಾಟಕ ಸಂಗೀತದ ವಿಕಾಸದಲ್ಲಿ ಈ ದಾಸ ಸಾಹಿತ್ಯದ ಕೊಡುಗೆ ಅತ್ಯಂತ ಪ್ರಮುಖವಾದುದು. 'ದಾಸರೆಂದರೆ ಪುರಂದರದಾಸರಯ್ಯ' ಎಂಬ ಕೀರ್ತಿಗೆ ಪಾತ್ರರಾದ ಪುರಂದರ ದಾಸರು (೧೬ನೆ ಶತಮಾನ) ಲಕ್ಷಗಟ್ಟಲೆ ದೇವರನಾಮ, ಸುಳಾದಿ, ಉಗಾಭೋಗಗಳನ್ನು ರಚಿಸಿ ದಾಸಸಾಹಿತ್ಯವನ್ನು ಬೆಳಸಿದ್ದಲ್ಲದೆ, ಸಂಗೀತಾಭ್ಯಾಸಕ್ರಮವನ್ನು ಪರಿಷ್ಕೃತಗೊಳಿಸಿ, ಸುವ್ಯವಸ್ಥಿತವಾದ ಸರಳೆ, ಅಲಂಕಾರ, ಗೀತೆಗಳನ್ನು ರಚಿಸಿದರು. 'ಕರ್ನಾಟಕ ಸಂಗೀತ ಪಿತಾಮಹ'ರೆನಿಸಿದ ಇವರು ಸ್ಥಾಪಿಸಿದ ಅಭ್ಯಾಸಕ್ರಮ ಎಷ್ಟು ಶತಮಾನಗಳಾದರೂ ಹಾಗೆಯೇ ಉಳಿದುಕೊಂಡು ಬಂದಿದೆ. ಪುರಂದರ ದಾಸರ ರಚನೆಗಳಲ್ಲಿ ಕಂಡುಬರುವ ಆಧ್ಯಾತ್ಮಿಕ, ಸಾಮಾಜಿಕ, ಜೀವನ ಮೌಲ್ಯಗಳು ಉಪಮಾತೀತವಾಗಿವೆ. ಭಕ್ತಿ, ಹರಿಸರ್ವೊತ್ತಮತ್ವ, ಮಾಧ್ವತತ್ತ್ವಜ್ಞಾನ, ಮಧ್ವಾಚಾರ್ಯರ ಹಿರಿಮೆ, ಪೌರಾಣಿಕ ಚಿತ್ರಗಳು, ಸಾಮಾಜಿಕ ಆಶಯಗಳ ನಿರೂಪಣೆ- ಇವೆಲ್ಲವೂ ದೊರೆಯುತ್ತದೆ. ನಾಮಸಂಕೀರ್ತನೆಯ ಮಹತ್ವ (ಹರಿನಾರಾಯಣ ಎನು ಮನೆವೆ), ಸದಾಚಾರ (ಆಚಾರವಿಲ್ಲದ ನಾಲಿಗೆ), ಫಲಾಪೇಕ್ಷೆಯಿಲ್ಲದ ನಿಷ್ಕಾಮಕರ್ಮಯೋಗದ ಹಿರಿಮೆ (ಹರಿ ನಿನ್ನೋಲುಮೆಯು), ದೈನ್ಯಭಾವ (ಕಂಡು ಕಂಡು ನೀ ಎನ್ನ), ವಾತ್ಸಲ್ಯಭಾವ (ಜಗದುದ್ಧಾರನ), ಗಹನವಾದ ತತ್ತ್ವಶಾಸ್ತ್ರದರ್ಶನ (ಒಳಗಣ್ಣಿನಿಂದಲಿ ನೋಡು), ಪರಮಾತ್ಮನಲ್ಲಿ ಸಂಪೂರ್ಣ ಶರಣಾಗತಿ (ಇನ್ನು ದಯ ಬಾರದೆ) - ಹೀಗೆ ಪುರಂದರ ದಾಸರ ರಚನೆಗಳಲ್ಲಿ ನಮಗೆ ಕಾಣಸಿಗದ ವಿಷಯವಿಲ್ಲ. ಅದರಿಂದಲೆ, ಅವರ ರಚನೆಗಳನ್ನು 'ಪುರಂದರೋಪನಿಷದ್' ಎಂದು ಕರೆದು ಅವುಗಳಿಗೆ ಉಪನಿಷತ್ತುಗಳ ಸ್ಥಾನವನ್ನು ಕೊಡಲಾಗಿದೆ. ತಮ್ಮ ಸುಮಾರು ೮೦ ವರ್ಷಗಳ ಜೀವನವನ್ನು ಹರಿದಾಸರಾಗಿ ರಾಗತಾಳಬದ್ಧವಾದ ಕೀರ್ತನೆಗಳನ್ನು ಹಾಡುತ್ತ, ಭಕ್ತಿಯನ್ನು ಹರಡುತ್ತ, ಸಂಗೀತದ ಪ್ರಚಾರದಲ್ಲಿಯೂ ಕೆಲಸಮಾಡುತ್ತ ಕಳೆದರು. ಕರ್ನಾಟಕ ಸಂಗೀತದ ಶ್ರೇಷ್ಠ ವಾಗ್ಗೇಯಕಾರರಲ್ಲಿ ಮೊದಲಿಗರಾಗಿದ್ದ ಸದ್ಗುರು ತ್ಯಾಗರಾಜರು ಪುರಂದರದ ಕೃತಿಗಳನ್ನು ಅಭ್ಯಾಸಮಾಡಿದ್ದರೆಂದೂ, ಅವರಿಂದ ಪ್ರೇರಣೆಯನ್ನು ಪಡೆದಿದ್ದರೆಂದೂ ತಿಳಿದುಬರುತ್ತದೆ. ಕನಕದಾಸರು, ಮಹಿಪತಿದಾಸರು, ಗೋಪಾಲದಾಸರು, ವಿಜಯದಾಸರು, ಜಗನ್ನಾಥದಾಸರು, ಪ್ರಸನ್ನವೇಂಕಟದಾಸರು - ಹೀಗೆ ಹರಿದಾಸ ಸಾಹಿತ್ಯ ಹಾಗು ಕರ್ನಾಟಕ ಸಂಗೀತ ಒಂದಕ್ಕೊಂದು ಪೂರಕವಾಗಿ ಬೆಳೆಯಿತು. 'ಕಲಿಯುಗದಲ್ಲಿ ದೇವನು ಕೀರ್ತನೆಗೆ ಒಲಿಯುವನು' ಎಂಬ ಕಾರಣದಿಂದಾಗಿ ಈ ದಾಸಕೂಟದಿಂದ ವಿಶಿಷ್ಟವೂ ವಿಪುಲವೂ ಆದ ಸಾಹಿತ್ಯ ಸಿದ್ಧವಾಯಿತು. ಶಾಸ್ತ್ರತಿಳಿವಳಿಕೆಯಲ್ಲಿ ಅಸಾಮಾನ್ಯರಾಗಿದ್ದು ಸಂಸ್ಕೃತ ಗ್ರಂಥಗಳನ್ನು ರಚಿಸಿದ್ದಲ್ಲದೆ, ಜನರಿಗೆ ತಿಳಿಹೇಳುವ ಉದ್ದೇಶದಿಂದ ಕನ್ನಡದಲ್ಲಿ ಗೇಯಪ್ರಧಾನವಾದ ಭಕ್ತಿರಸಭಾರಿತವಾದ ದೇವರನಾಮಗಳನ್ನು ರಚಿಸಿದ್ದು ಅಚ್ಚರಿಯೇ ಸರಿ. ವಚನಸಾಹಿತ್ಯ ಶಿವೋಪಾಸನೆಯನ್ನು ಪ್ರತಿಪಾದಿಸಿದರೆ, ದಾಸಸಾಹಿತ್ಯವು ಹರಿಸರ್ವೊತ್ತಮತ್ವವನ್ನು ಪ್ರತಿಪಾದಿಸಿ ಹರಿಭಕ್ತಿಯನ್ನು ಕೇಂದ್ರವಾಗಿರಿಸಿಕೊಂಡಿದೆ. ಎರಡೂ ಸಾಹಿತ್ಯಪ್ರಕಾರಗಳು ಭಕ್ತಿ, ಆಧ್ಯಾತ್ಮಿಕ ಮೌಲ್ಯಗಳು, ದೇವರಿಗೆ ಸರ್ವಾರ್ಪಣದ ಮನೋಭಾವ, ಉತ್ತಮ ಸಾಮಾಜಿಕ ಜೀವನ, ಸತ್ಯ, ಶೌಚಾಚಾರ, ಸರಳತೆ ಇತ್ಯಾದಿಗಳನ್ನು ತಮ್ಮದೇ ಆದಂತಹ ವಿಶಿಷ್ಟ ರೀತಿಗಳಲ್ಲಿ ಸಾರುತ್ತವೆ. 

೧೬ನೆ ಶತಮಾನ ದೇಶದಲ್ಲೆಲ್ಲ ಭಕ್ತಿ ಪಂಥ ಪ್ರಚಾರದಲ್ಲಿದ್ದ ಕಾಲ. ದಕ್ಷಿಣದಲ್ಲಿ ಹರಿದಾಸರು ಕನ್ನಡದಲ್ಲಿ ಪರಮಾತ್ಮನನ್ನು ಹಾಡಿ ಕೊಂಡಾಡಿದರೆ, ಉತ್ತರದಲ್ಲಿ ಕಬೀರ್, ಸೂರದಾಸ್, ಮೀರಾಬಾಯಿ, ತುಳಸಿದಾಸ್ ಮುಂತಾದ ಪರಮೋತ್ಕೃಷ್ಟ  ಭಗವದ್ಭಕ್ತರು ಹಿಂದಿಯಲ್ಲಿ ಅಪಾರವಾದ 'ಭಜನ್'ಗಳನ್ನು ರಚಿಸಿ ಧನ್ಯರಾದರು. ದಾಸನಾಗಿ, ಸಖನಾಗಿ, ತಾಯಿಯಾಗಿ, ಪ್ರಣಯಿನಿಯಾಗಿ ಭಗವಂತನನ್ನು ಅನುಭವಿಸಿದ ಈ ಭಕ್ತಾಗ್ರೇಸರರು ತಮ್ಮ ಅನುಭವವನ್ನು ನಮಗೆ ತಮ್ಮ ಭಜನ್ ಗಳ ಮೂಲಕ ನೀಡಿದರು. ಅಂತೆಯೆ, ಮಹಾರಾಷ್ಟ್ರದಲ್ಲಿ ಸಂಕೀರ್ತನೆಗಳಿಂದ ಭಕ್ತಿಯನ್ನು ಹರಡಿದವರು ತುಕಾರಾಂ, ನಾಮದೇವ್, ಜ್ಞಾನೇಶ್ವರ್, ರಾಮದಾಸ್, ಮುಕ್ತಾಬಾಯಿ, ಸಕ್ಕೂಬಾಯಿ, ಭಾನುದಾಸ್ ಮುಂತಾದವರು. ಪರಮಾತ್ಮನಲ್ಲಿ 'ಪ್ರೇಮಭಕ್ತಿ'ಯನ್ನು ಹೊಂದಿ "ವಿಠಲ ವಿಠಲ ಪಾಂಡುರಂಗ" ಎಂದು ಹಾಡುತ್ತ ಮರಾಠಿಯಲ್ಲಿ 'ಅಭಂಗ್' ಗಳನ್ನು ರಚಿಸಿದರು. ಅಭಂಗ್ ಎಂದರೆ ಭಂಗವಿಲ್ಲದ್ದು, ಅಂದರೆ ನಿರಂತರವಾಗಿ ನಡೆಯುವಂಥದ್ದು - ಅದೇ ಭಗವನ್ನಾಮ ಸಂಕೀರ್ತನೆ. 

ಬಂಗಾಳದಲ್ಲಿ ೧೬ನೆ ಶತಮಾನದಲ್ಲಿ ಚೈತನ್ಯ ಮಹಾಪ್ರಭುಗಳು ಮಾಧ್ವಸಿದ್ಧಾಂತದಿಂದ ಪ್ರಭಾವಿತರಾಗಿ  ಕೃಷ್ಣಭಕ್ತಿಯ ಪರಾಕಾಷ್ಟೆಯನ್ನು ಸಾರಿದರು. ಸದಾ ಕೃಷ್ಣನಾಮವನ್ನು ಜಪಿಸಿ, ಕೃಷ್ಣನನ್ನು ಕುರಿತ ಕೀರ್ತನೆಗಳನ್ನು ತನ್ಮಯವಾಗಿ ಹಾಡುತ್ತ, ಕುಣಿಯುತ್ತ, ತಮ್ಮ ಮನೆಯನ್ನು ಸಾಮೂಹಿಕ ಕೀರ್ತನೆ, ಭಜನೆಗಳ ಕೇಂದ್ರವನ್ನಾಗಿ ಮಾಡಿಕೊಂಡಿದ್ದರು. 

ಶುದ್ಧಾದ್ವೈತದ ಪ್ರವರ್ತಕರಾದ ವಲ್ಲಭಾಚಾರ್ಯ, 'ನಾರಾಯಣೀಯಮ್' ರಚಿಸಿದ ನಾರಾಯಣ ಭಟ್ತಾತ್ರಿ, 'ಗೀತಗೋವಿಂದ' ಮಹಾಕಾವ್ಯದ ಜಯದೇವಕವಿ - ಹೀಗೆ ಆಧ್ಯಾತ್ಮಚಿಂತಕರು ಹಾಗು ಅವರ   ಗಾಯನಯೋಗ್ಯ ರಚನೆಗಳು ಲೆಕ್ಕವಿಲ್ಲದಷ್ಟು. ಇಷ್ಟು ಜನ ಮಹಾನುಭಾವರ ಆರಾಧ್ಯದೈವ ಬೇರೆ ಬೇರೆ, ಅವರು ಹಿಡಿದುಕೊಂಡ ಮಾರ್ಗಗಳು ಬೇರೆ ಬೇರೆ, ಆದ ಅನುಭವಗಳು ಬೇರೆ ಬೇರೆ, ರಚಿಸಿದ ಕೃತಿಗಳು ಬೇರೆ ಬೇರೆ, ಬಳಸಿದ ಭಾಷೆಗಳು ಬೇರೆ ಬೇರೆ. ಆದರೆ ಎಲ್ಲರ ರಚನೆಗಳು ಹೃದಯದಿಂದ ಚಿಮ್ಮಿ ಬಂದವುಗಳೇ ಹೊರತು, ಶುಷ್ಕ ಬುದ್ಧಿಯ, ನೀರಸ ಪಾಂಡಿತ್ಯದ ಫಲಗಳಲ್ಲ. ಎಲ್ಲರ ರಚನೆಗಳೂ ಅಲೌಕಿಕಾನಂದದ, ಆ ಚರಮ ಸತ್ಯದ (Ultimate truth) ಅನುಭವದ ಕನ್ನಡಿಗಳು. 

"ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ । ಸರ್ವದೇವ ನಮಸ್ಕಾರಃ ಕೇಶವಂ ಪ್ರತಿ ಗಚ್ಛತಿ ।।" ಎಂಬುದಾಗಿ ನಮ್ಮ ಶಾಸ್ತ್ರಗಳು ಸಾರಿಲ್ಲವೇ ?